ADVERTISEMENT

ಕರೆ ದರ ಹೆಚ್ಚಳ ಮುನ್ಸೂಚನೆ!

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST
ಕರೆ ದರ ಹೆಚ್ಚಳ ಮುನ್ಸೂಚನೆ!
ಕರೆ ದರ ಹೆಚ್ಚಳ ಮುನ್ಸೂಚನೆ!   

ನವದೆಹಲಿ (ಪಿಟಿಐ):ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿರುವ ಹೊಸ `ತರಂಗಾಂತರ ದರ~ ಪ್ರಸ್ತಾವವನ್ನು ಸರ್ಕಾರ ಅಂಗೀಕರಿಸಿದರೆ, ಕೆಲವು ಆಯ್ದ ದೂರವಾಣಿ ವೃತ್ತಗಳಲ್ಲಿ ಮೊಬೈಲ್ ಕರೆ ದರವನ್ನು ಎರಡು ಪಟ್ಟು ಹೆಚ್ಚಿಸುವುದು ಅನಿವಾರ್ಯ ಎಂದು ಮೊಬೈಲ್ ಸೇವಾ ಸಂಸ್ಥೆಗಳು ಮುನ್ಸೂಚನೆ ನೀಡಿವೆ.

ಮಂಗಳವಾರ ಇಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ-ಸಂವಹನ ಖಾತೆ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ದೂರವಾಣಿ ಸೇವಾ ಸಂಸ್ಥೆಗಳ `ಸಿಇಒ~ಗಳು `ಕರೆದರ ದುಪ್ಪಟ್ಟು~ ಸೂಚನೆ ನೀಡಿದರು.

`ಟ್ರಾಯ್~ ಪ್ರಸ್ತಾವವನ್ನು ಸರ್ಕಾರ ಅಂಗೀಕರಿಸಿದರೆ, ಖಂಡಿತವಾಗಿಯೂ ಕೆಲವು ದೂರವಾಣಿ ವೃತ್ತಗಳಲ್ಲಿ ಕರೆ ದರವನ್ನು ಎರಡು ಪಟ್ಟಿಗಿಂತ ಹೆಚ್ಚು ಮಾಡುತ್ತೇವೆ ಎಂದು ಭಾರ್ತಿ ಏರ್‌ಟೆಲ್ ಸಿಇಒ ಸಂಜಯ್ ಕಪೂರ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.