ADVERTISEMENT

ಕಾಫಿ ರಫ್ತು ವಹಿವಾಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST
ಕಾಫಿ ರಫ್ತು ವಹಿವಾಟು ಇಳಿಕೆ
ಕಾಫಿ ರಫ್ತು ವಹಿವಾಟು ಇಳಿಕೆ   

ನವದೆಹಲಿ (ಪಿಟಿಐ): ಪ್ರಸಕ್ತ ಕಾಫಿ ಇಳುವರಿ  ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಕಾಫಿ ರಫ್ತು ಶೇ 15ರಷ್ಟು ಕುಸಿತ ಕಂಡಿದ್ದು, 58,598 ಟನ್‌ಗಳಷ್ಟಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ. 

 ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ದೇಶದಿಂದ 68,740 ಟನ್‌ಗಳಷ್ಟು ಕಾಫಿ  ರಫ್ತಾಗಿದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಕಾಫಿ ರಫ್ತು ಶೇ 7ರಷ್ಟು ಇಳಿಕೆ ಕಂಡಿದ್ದು 20 ಸಾವಿರ ಟನ್‌ಗಳಷ್ಟಾಗಿದೆ. 2010ರಲ್ಲಿ ದೇಶದಿಂದ ಒಟ್ಟು 2.7 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. 2011ರಲ್ಲಿ ಇದು 3.50 ಲಕ್ಷ ಟನ್‌ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.