ADVERTISEMENT

ಕಾರ್ಪ್ ಬ್ಯಾಂಕ್: ಸ್ಮಾರ್ಟ್ ಫೋನ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST
ಕಾರ್ಪ್ ಬ್ಯಾಂಕ್: ಸ್ಮಾರ್ಟ್ ಫೋನ್‌ನಲ್ಲಿ
ಕಾರ್ಪ್ ಬ್ಯಾಂಕ್: ಸ್ಮಾರ್ಟ್ ಫೋನ್‌ನಲ್ಲಿ   

ಮಂಗಳೂರು: ಕಾರ್ಪೊರೇಷನ್ ಬ್ಯಾಂಕ್‌ನ ಗ್ರಾಹಕರಿಗೆ ಆಂಡ್ರಾಯ್ಡ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಂಕ್‌ನ ಸಮಗ್ರ ಮಾಹಿತಿ ಸಿಗುವ ವ್ಯವಸ್ಥೆಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.  ಬ್ಯಾಂಕ್‌ನ 107ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಅವರು ಈ ಸೌಲಭ್ಯ ಉದ್ಘಾಟಿಸಿದರು.
 
ಐಫೋನ್ ಮತ್ತು ಐಪ್ಯಾಡ್‌ಗಳಲ್ಲಿ ಸಹ ಶೀಘ್ರವೇ ಈ ಸೌಲಭ್ಯ ಲಭಿಸಲಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಇದೇ ಪ್ರಥಮ ಬಾರಿಗೆ ಕಾರ್ಪೊರೇಷನ್ ಬ್ಯಾಂಕ್‌ನಿಂದ ಇಂತಹ ಸೇವೆ ಆರಂಭವಾಗಿದೆ ಎಂದರು.

 ಬ್ಯಾಂಕ್‌ನ ಸಂಸ್ಥಾಪಕ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿ ಸ್ಮರಿಸಿದ ಅವರು, ಅವರ ಚಿಂತನೆಗಳನ್ನು ಬ್ಯಾಂಕ್ ಮೈಗೂಡಿಸಿದ್ದರಿಂದಲೇ ಇಂದು ಬ್ಯಾಂಕ್ ್ಙ 2.20 ಲಕ್ಷ ಕೋಟಿಗಳ ವ್ಯವಹಾರ ನಡೆಸುವುದು ಸಾಧ್ಯವಾಗಿದೆ ಎಂದರು. 

 ಇದೇ ಸಂದರ್ಭದಲ್ಲಿ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಡಾ.ಬಿ.ಎಂ.ಹೆಗ್ಡೆ, ಬಿ.ಆರ್.ಶೆಟ್ಟಿ, ಡಾ.ಬಿ.ರಮಣ ರಾವ್, ಕದ್ರಿ ಗೋಪಾಲನಾಥ್ ಮತ್ತು ಇಳಾ ಭಟ್ ಅವರನ್ನು ಸನ್ಮಾನಿಸಲಾಯಿತು. 

 ಇದೇ ಪ್ರಥಮ ಬಾರಿಗೆ ಬ್ಯಾಂಕ್ ಇಂತಹ ಸನ್ಮಾನ ಆರಂಭಿಸಿದ್ದು, ಮುಂದಿನ ವರ್ಷದಿಂದ ಈ ಸಂಪ್ರದಾಯ ಮುಂದುವರಿಯಲಿದೆ ಎಂದು ಪ್ರಕಟಿಸಲಾಯಿತು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶ್ವಿನಿ ಕುಮಾರ್ ಮತ್ತು ಅಮರ್‌ಲಾಲ್ ದುಲ್ತಾನಿ ಉಪಸ್ಥಿತರಿದ್ದರು. ಬಳಿಕ ನಡೆದ ಬಾಲಿವುಡ್ ಹಿನ್ನೆಲೆಗಾಯಕ ಕೆ.ಕೆ. (ಕೃಷ್ಣಕುಮಾರ್ ಕುನ್ನತ್) ಅವರ ರಸಸಂಜೆ ಪ್ರೇಕ್ಷಕರನ್ನು ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.