ನವದೆಹಲಿ/ಮುಂಬೈ(ಪಿಟಿಐ): ಐದು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಒಂದು ವಿಭಾಗದ ಪೈಲಟ್‌ಗಳು ಮಂಗಳವಾರ ಮುಷ್ಕರ ನಡೆಸಿದ್ದರಿಂದ 5 ವಿಮಾನ ಹಾರಾಟ ರದ್ದಾಯಿತು.
ಇವರೆಲ್ಲ ಪ್ರಾದೇಶಿಕ ವಿಮಾನ ನಿಲ್ದಾಣ ಸಂಪರ್ಕಿಸುವ 70 ಆಸನಗಳ ಚಿಕ್ಕ ವಿಮಾನಗಳ ಪೈಲಟ್‌ಗಳು ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ದೆಹಲಿಯಿಂದ ಧರ್ಮಶಾಲಾ ಮತ್ತು ಡೆಹ್ರಾಡೂನ್‌ಗೆ ಹೋಗುವ ಎರಡು ವಿಮಾನ,ಶಿಮ್ಲಾಕ್ಕೆ ತೆರಳುವ ವಿಮಾನ ರದ್ದುಪಡಿಸಲಾಗಿದೆ ಎಂದಿರುವ ಸಂಸ್ಥೆ ಮೂಲಗಳು, `ಸಿಇಒ~ ಸಂಜಯ್ ಅಗರ್‌ವಾಲ್, ಪೈಲಟ್‌ಗಳನ್ನು ಶೀಘ್ರವೇ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.