ADVERTISEMENT

ಖೋಟಾ ನೋಟು ಚಲಾವಣೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ದೇಶದಲ್ಲಿ ಖೋಟಾ ನೋಟುಗಳ ಚಲಾವಣೆ ಶೇ 400ರಷ್ಟು ಹೆಚ್ಚಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ದೇಶದ ಹಲವು ಹಣಕಾಸು ವಹಿವಾಟು ಜಾಲಗಳ ಮೂಲಕ ಖೋಟಾ ನೋಟು ಚಲಾವಣೆಯಾಗುತ್ತಿದೆ ಎಂದು ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಹೇಳಿದೆ. 2010-11ನೇ ಹಣಕಾಸು ವರ್ಷದ ಡಿಸೆಂಬರ್ ಅಂತ್ಯದ ವರೆಗೆ ಖೋಟಾ ನೋಟು ವಹಿವಾಟಿಗೆ ಸಂಬಂಧಿಸಿದಂತೆ ್ಙ35 ಕೋಟಿ ಮೌಲ್ಯದ ಒಟ್ಟು 4,23,539 ಪ್ರಕರಣಗಳು ದಾಖಲಾಗಿವೆ.  ಹಣ ಲೇವಾದೇವಿ ತಡೆ ನಿಯಮದಡಿ (ಪಿಎಂಎಲ್‌ಎ) 2009-10ನೇ ಸಾಲಿನಲ್ಲಿ ಒಟ್ಟು 1,27,781 ಪ್ರಕರಣಗಳು ದಾಖಲಾಗಿದ್ದವು.

ಇತ್ತೀಚೆಗಷ್ಟೇ ದೆಹಲಿ ಪೋಲಿಸರು ್ಙ2.24 ಕೋಟಿ ಮುಖ ಬೆಲೆಯ ಖೋಟಾ ನೋಟುಗಳನ್ನು ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದರು. ಖೋಟಾ ನೋಟುಗಳಲ್ಲಿ ಶೇ 60ರಷ್ಟು  ನೋಟುಗಳು ್ಙ500 ರ  ನೋಟುಗಳಾಗಿರುತ್ತವೆ ಎಂದು `ಎಫ್‌ಐಯು~ ಹೇಳಿದೆ. ಸಂಶಯಾಸ್ಪದ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಪ್ರಸಕ್ತ ಅವಧಿಯಲ್ಲಿ ಒಟ್ಟು 37,907 ಪ್ರಕರಣ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.