ADVERTISEMENT

ಗೃಹ ಸಾಲ:ರೂ. 17 ಸಾವಿರ ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ನವದೆಹಲಿ (ಪಿಟಿಐ): ಗೃಹ ಸಾಲ ನೀಡುವ ಸಂಸ್ಥೆಗಳಿಗೆ ಮುಂದಿನ ಆರು ತಿಂಗಳಲ್ಲಿ ಸಾಲ ಮರು ಹೊಂದಾಣಿಕೆಗಾಗಿ ಇನ್ನೂರೂ.9 ಸಾವಿರ ಕೋಟಿ  ನೆರವು ನೀಡಲಾಗುವುದು ಎಂದು ರಾಷ್ಟ್ರೀಯ ಗೃಹ ಬ್ಯಾಂಕ್   (ಎನ್‌ಎಚ್‌ಬಿ)  ಹೇಳಿದೆ.

ಪ್ರಸಕ್ತ ಜುಲೈನಿಂದ- ಜೂನ್ ಅವಧಿಯಲ್ಲಿ ಒಟ್ಟುರೂ.17 ಸಾವಿರ ಕೋಟಿ ಗೃಹ ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದ್ದು,  ಈ ಗುರಿ ತಲುಪುವ ನಿರೀಕ್ಷೆ ಇದೆ ಎಂದು `ಎನ್‌ಎಚ್‌ಬಿ' ವ್ಯವಸ್ಥಾಪಕ ಆರ್.ವಿ ವರ್ಮಾ  ಶನಿವಾರ ಇಲ್ಲಿ ನಡೆದ `ರಿಯಲ್ ಎಸ್ಟೇಟ್ ಅಭಿವೃದ್ಧಿ ಸಮಿತಿ'  ಸಭೆಯಲ್ಲಿ ಹೇಳಿದರು.

ಒಟ್ಟುರೂ.17 ಸಾವಿರ ಕೋಟಿಯಲ್ಲಿ ಶೇ 90ರಷ್ಟು ಸಾಲವನ್ನುರೂ.25 ಲಕ್ಷಕ್ಕಿಂತಲೂ ಕಡಿಮೆ ವೆಚ್ಚದ ಗೃಹಗಳಿಗೆ ನೀಡಲಾಗುವುದು. ಇದರಲ್ಲಿರೂ.8 ಸಾವಿರ ಕೋಟಿ ಈಗಾಗಲೇ ವಿತರಿಸಲಾಗಿದೆ ಎಂದರು.

ಸರಾಸರಿ ಶೇ 9.25ರಷ್ಟು ಬಡ್ಡಿ ದರದಲ್ಲಿ ವಿವಿಧ ಗೃಹ ಸಾಲ ಸಂಸ್ಥೆಗಳಿಗೆ ಸಾಲ ನೀಡುತ್ತಿದ್ದೇವೆ. ಗ್ರಾಮೀಣ ಮತ್ತು ಅಗ್ಗದ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕಡಿಮೆ ವರಮಾನ ವರ್ಗದವರಿಗೆ (ಎಲ್‌ಐಜಿ)ರೂ.5 ಲಕ್ಷದವರೆಗಿನ ಗೃಹ ಸಾಲಕ್ಕೆ 15 ವರ್ಷಗಳ ಅವಧಿಗೆ ಶೇ 8.5ರಷ್ಟು ಸ್ಥಿರ ಬಡ್ಡಿ ದರ ಇದೆ ಎಂದರು.

ಗ್ರಾಮೀಣ ಗೃಹ ಸಾಲದ ಬಡ್ಡಿ ದರ ಸರಾಸರಿ ದರಕ್ಕಿಂತ ಶೇ 0.50    ಮೂಲಾಂಶಗಳಷ್ಟು ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.