ನವದೆಹಲಿ (ಪಿಟಿಐ):ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಕಳೆದ ಒಂದು ವಾರದಿಂದ ಕುಸಿಯುತ್ತಿದ್ದು, ಇದರ ಪರಿಣಾಮ ಶುಕ್ರವಾರದ ಇಲ್ಲಿ 10 ಗ್ರಾಂ ಸ್ಟಾಂಡ ರ್ಡ್ ಚಿನ್ನದ ಬೆಲೆ ರೂ 840 ಇಳಿಕೆ ಕಂಡು ರೂ32,100ರಷ್ಟಾಗಿದೆ. ಬೆಳ್ಳಿ ಧಾರಣೆ ಕೂಡ ಕೆ.ಜಿಗೆ ರೂ800 ಏರಿಕೆ ಕಂಡಿದ್ದು ರೂ62,800 ತಲುಪಿದೆ.
ಷೇರುಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಿಂದ ಚಿನ್ನದ ಧಾರಣೆ ನಿರಂತರ ಇಳಿಕೆ ಕಾಣುತ್ತಿದೆ. ಶುಕ್ರವಾರ ಆಭರಣ ಚಿನ್ನದ ಬೆಲೆ 175 ಇಳಿಕೆಯಾಗಿದ್ದು, 31,475 ರಷ್ಟಾಗಿದೆ.
ಷೇರುಪೇಟೆ ಚೇತರಿಕೆ
ಮುಂಬೈ (ಪಿಟಿಐ): ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 169 ಅಂಶಗಳಷ್ಟು ಏರಿಕೆ ಕಂಡಿದ್ದು 19 ತಿಂಗಳಲ್ಲೇ ಗರಿಷ್ಠ ಮಟ್ಟವಾದ 19,339 ಅಂಶಗಳನ್ನು ತಲುಪಿದೆ. `ನಿಫ್ಟಿ' 55 ಅಂಶಗಳಷ್ಟು ಚೇತರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.