ADVERTISEMENT

ಚಿನ್ನ-ಬೆಳ್ಳಿ ದಾಖಲೆ ಬೆಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:30 IST
Last Updated 21 ಫೆಬ್ರುವರಿ 2011, 15:30 IST

ಲಂಡನ್ (ಬ್ಲೂಂಬರ್ಗ್):  ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಮತ್ತು ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಚಿನ್ನ ಮತ್ತು ಬೆಳ್ಳಿ ಧಾರಣೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಕಳೆದ ಏಳು ತಿಂಗಳಲ್ಲೇ ಗರಿಷ್ಠ ಎನ್ನಬಹುದಾದ ಪ್ರತಿ ಔನ್ಸ್ ಚಿನ್ನಕ್ಕೆ 1,400 ಡಾಲರ್ ದರ ಸೋಮವಾರ ಇಲ್ಲಿ ದಾಖಲಾಯಿತು. ಬೆಳ್ಳಿ ಕೂಡ 30ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿ ಇತಿಹಾಸ ನಿರ್ಮಿಸಿತು. ಜನವರಿ 4ರ ವಹಿವಾಟಿಗೆ ಹೋಲಿಸಿದರೆ ಚಿನ್ನದ ಬೆಲೆ ಶೇ 1ರಷ್ಟು ಹೆಚ್ಚಿದೆ. ಬೆಳ್ಳಿ ಧಾರಣೆ ಶೇ 2.7ರಷ್ಟು ಹೆಚ್ಚಿದ್ದು, ಪ್ರತಿ ಔನ್ಸ್‌ಗೆ 33.51 ಡಾಲರ್ ತಲುಪಿದೆ. ಮಾರ್ಚ್ 1980ರ ನಂತರ ದಾಖಲಾಗಿರುವ ಬೆಳ್ಳಿಯ ಗರಿಷ್ಠ ಧಾರಣೆ ಇದಾಗಿದೆ.

ಹಣದುಬ್ಬರ ದರ ಏರಿಕೆ ಮತ್ತು ಕರೆನ್ಸಿ ಅಪಮೌಲ್ಯ ಇತ್ಯಾದಿ ಕಾರಣಗಳಿಂದ ಕಳೆದ ಡಿಸೆಂಬರ್‌ನಲ್ಲಿ ಚಿನ್ನದ ಬೆಲೆ ಶೇ 30ರಷ್ಟು ಹೆಚ್ಚಿ, ಪ್ರತಿ ಔನ್ಸ್‌ಗೆ 1,431.25 ಡಾಲರ್ ತಲುಪಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.