ADVERTISEMENT

ಚಿನ್ನ ರೂ.220 ಇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 20:17 IST
Last Updated 13 ಮಾರ್ಚ್ 2014, 20:17 IST

ನವದೆಹಲಿ/ಮುಂಬೈ(ಪಿಟಿಐ): ಚಿನ್ನ ಸಂಗ್ರಹಕಾರರು ದೊಡ್ಡ ಪ್ರಮಾಣ ದಲ್ಲಿ ಸರಕು ಮಾರಾಟ ಮಾಡಲು ಮುಂದಾಗಿದ್ದರಿಂದ ದೆಹಲಿ ಮತ್ತು ಮುಂಬೈ ಚಿನಿವಾರ ಪೇಟೆಗಳಲ್ಲ ಬಂಗಾರದ ಧಾರಣೆ ಗುರುವಾರ ₨220ರವರೆಗೂ ಕುಸಿತ ಕಂಡಿತು.

೧೦ ಗ್ರಾಂ ಚಿನ್ನ ನವದೆಹಲಿಯಲ್ಲಿ ₨220ರಷ್ಟು ತಗ್ಗಿದ್ದರೆ, ಮುಂಬೈನಲ್ಲಿ ₨158ರಷ್ಟು ಕಡಿಮೆ ಆಯಿತು. ಸಿದ್ಧ ಬೆಳ್ಳಿ ದೆಹಲಿಯಲ್ಲಿ ₨200 ಮತ್ತು ಮುಂಬೈನಲ್ಲಿ ₨410ರಷ್ಟು ಬೆಲೆ ಕಳೆದುಕೊಂಡಿತು.

ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ₨30,60೦ಕ್ಕೂ, ಅಪರಂಜಿ ಚಿನ್ನ ₨30,80೦ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ₨46,90೦ರಂತೆ ಮಾರಾಟವಾಯಿತು.

ಮುಂಬೈ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ₨30,312 ರಲ್ಲೂ, ಅಪರಂಜಿ ಚಿನ್ನ ₨30,482 ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ₨47,050ರಂತೆ ಮಾರಾಟ ವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT