
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಮದುವೆ ಕಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಕಳೆದೊಂದು ವಾರದಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ್ದು, 10 ಗ್ರಾಂಗೆ ರೂ. 29,040ರಷ್ಟಾಗಿದೆ.
99.9 ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ಶನಿವಾರ ರೂ.140 ಏರಿಕೆ ಕಂಡಿದೆ. ಬೆಳ್ಳಿ ಧಾರಣೆ ರೂ.100 ಕುಸಿದು, ಕೆ.ಜಿಗೆ ರೂ.56,500ರಲ್ಲಿ ಸ್ಥಿರಗೊಂಡಿದೆ.
ಹೂಡಿಕೆದಾರರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ 1 ಔನ್ಸ್‌ಗೆ ಶೇ. 0.1ರಷ್ಟು ಏರಿ 1,642 ಡಾಲರ್ ಗಳಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.