ಮುಂಬೈ: ಮುಂಬೈ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಧಾರಣೆ ₹320ರಷ್ಟು ಹೆಚ್ಚಾಗಿ 10 ಗ್ರಾಂಗೆ ಒಂದೂವರೆ ತಿಂಗಳ ಗರಿಷ್ಠ ಮಟ್ಟವಾದ ₹29,090ಕ್ಕೆ ಏರಿದೆ.
ಚಿನ್ನಾಭರಣ ಮಾರಾಟಗಾರರು ಮತ್ತು ಸಂಗ್ರಹಕಾರರು ಹೆಚ್ಚಿನ ಖರೀದಿ ಮಾಡಿದ್ದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಳ್ಳಿ ಧಾರಣೆ ₹650 ರಷ್ಟು ಹೆಚ್ಚಾಗಿ ಕೆ.ಜಿಗೆ ₹40 ಸಾವಿರದಂತೆಮಾರಾಟವಾಯಿತು.
ಕೈಗಾರಿಕೆಗಳು ಮತ್ತು ನಾಣ್ಯ ಸಂಗ್ರಹಕಾರರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಲೆ ಏರಿಕೆ ಕಂಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.