ADVERTISEMENT

ಜಿಎಸ್‌ಟಿ ಮರುಪಾವತಿಗೆ 10 ಸಾವಿರ ಅರ್ಜಿ

ಪಿಟಿಐ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಜಿಎಸ್‌ಟಿ ಮರುಪಾವತಿಗೆ 10 ಸಾವಿರ ಅರ್ಜಿ
ಜಿಎಸ್‌ಟಿ ಮರುಪಾವತಿಗೆ 10 ಸಾವಿರ ಅರ್ಜಿ   

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಲ್ಲಿ ನವೆಂಬರ್‌ ತಿಂಗಳವರೆಗೆ 10,000ಕ್ಕೂ ಹೆಚ್ಚು ರಫ್ತುದಾರರು ತೆರಿಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮರುಪಾವತಿಗೆ ಸಲ್ಲಿಸಿರುವ ಮೊತ್ತವು ನಿರ್ದಿಷ್ಟ ತಿಂಗಳಿನಲ್ಲಿ ಪಾವತಿಸಿರುವ ತೆರಿಗೆ ಮೊತ್ತಕ್ಕಿಂತಲೂ ಹೆಚ್ಚಾಗದಂತೆ ಖಾತರಿ ಪಡಿಸಿ ಎಂದು ಜಿಎಸ್‌ಟಿಎನ್‌ ರಫ್ತುದಾರರನ್ನು ಕೇಳಿದೆ.

ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯು (ಸಿಬಿಇಸಿ) ನವೆಂಬರ್ ತಿಂಗಳಿನಿಂದ ತೆರಿಗೆ ಮರುಪಾವತಿಸುವ ಪ್ರಕ್ರಿಯೆ ಆರಂಭಿಸಿದೆ. ಸಮಗ್ರ ಜಿಎಸ್‌ಟಿ ಪಾವತಿಸಿರುವ ಮತ್ತು ಜಿಎಸ್‌ಟಿಆರ್‌–1ರಲ್ಲಿ ‘ಟೇಬಲ್‌ 6ಎ’ ಮೂಲಕ ಸರಕುಗಳ ರಪ‍್ತು ಬಿಲ್‌ ಸಲ್ಲಿಸಿರುವವರಿಗೆ ಮರುಪಾವತಿ ನೀಡಲಾಗುತ್ತಿದೆ.

ADVERTISEMENT

ಜಿಎಸ್‌ಟಿ ಜಾರಿಯಾಗಿ ನಾಲ್ಕು ತಿಂಗಳಲ್ಲಿ ₹ 6,500 ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಮರುಪಾವತಿ ಪಡೆಯಲು ರಫ್ತುದಾರರು ನಿರ್ದಿಷ್ಟ ತಿಂಗಳ ಜಿಎಸ್‌ಟಿಆರ್‌–3ಬಿ ಸಲ್ಲಿಸಬೇಕು. ಮರುಪಾವತಿ ಮೊತ್ತವು ಜಿಎಸ್‌ಟಿಆರ್–3ಬಿನಲ್ಲಿ ಪಾವತಿಸಿದ ಮೊತ್ತಕ್ಕಿಂತಲೂ ಹೆಚ್ಚಿಗೆ ಇರಬಾರದು.

ತಾಂತ್ರಿಕ ಸಮಸ್ಯೆ, ಲೆಕ್ಕಪತ್ರ ಮಾಹಿತಿ ಹೊಂದಾಣಿಕೆ ಆಗದೇ ಇರುವುದರಿಂದ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಜುಲೈನಲ್ಲಿ 55.87 ಲಕ್ಷ, ಆಗಸ್ಟ್‌ (51.37 ಲಕ್ಷ) ಮತ್ತು  ಸೆಪ‍್ಟೆಂಬರ್‌ನಲ್ಲಿ 42 ಲಕ್ಷ ರಿಟರ್ನ್‌ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.