ವಾಷಿಂಗ್ಟನ್ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ವಿಶ್ವದ ಅರ್ಥ ವ್ಯವಸ್ಥೆಯು ಶೇಕಡ 4.4 ಹಾಗೂ ಭಾರತದ ‘ಜಿಡಿಪಿ’ ಶೇ 8.4ರಷ್ಟು ವೃದ್ಧಿಯಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜು ಮಾಡಿದೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಅಂದಾಜು ಮಟ್ಟಕ್ಕಿಂತ ಮೇಲ್ಮುಖ ಪ್ರಗತಿಯಲ್ಲಿದೆ. ಅಮೆರಿಕದಲ್ಲಿ ಆರ್ಥಿಕತೆ ಉತ್ತೇಜಿಸಲು ಕೈಗೊಂಡ ಉಪಕ್ರಮ ನೀತಿಗಳು ತಕ್ಕ ಮಟ್ಟಿಗಿನ ಪರಿಣಾಮ ಬೀರಿವೆ’ ಎಂದು ‘ಐಎಂಎಫ್’ ತನ್ನ ಪರಿಷ್ಕೃತ ‘ವಿಶ್ವ ಆರ್ಥಿಕ ಮುನ್ನೋಟ’ ವರದಿಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.