ನವದೆಹಲಿ (ಪಿಟಿಐ): `ಮುಂದಿನ ಐದು ವರ್ಷಗಳಲ್ಲಿ ಶೇ 8ರಷ್ಟು ಆರ್ಥಿಕ ವೃದ್ಧಿ ದರ (ಜಿಡಿಪಿ) ಸಾಧಿಸಲು ಅವಿರತ ಪ್ರಯತ್ನದ ಅಗತ್ಯವಿದೆ. ದೇವರ ದಯೆಯಿಂದ ಇದು ಸಾಧ್ಯ ಎನ್ನುವ ಗ್ರಹಿಕೆ ತಪ್ಪು~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ (2012-17) `ಜಿಡಿಪಿ~ ಶೇ 9ರಷ್ಟು ಪ್ರಗತಿ ಕಾಣಲಿದೆ ಎನ್ನುವುದನ್ನು ಮೊಂಟೆಕ್ ಅಲ್ಲಗಳೆದಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ದೇಶೀಯ ಮಟ್ಟದ ಹಲವು ಪ್ರತಿಕೂಲ ಸಂಗತಿಗಳಿಂದ ಶೇ 8ರಷ್ಟು ವೃದ್ಧಿ ದರ ಸಾಧಿಸುವುದೇ ದೊಡ್ಡ ಸವಾಲು. ಇದಕ್ಕೆ ಸಾಕಷ್ಟು ಪ್ರಯತ್ನ ನಡೆಸಬೇಕಿದೆ ಎಂದು ಅವರು ಇಲ್ಲಿ ನಡೆದ ರಾಜ್ಯ ಯೋಜನಾ ಮಂಡಳಿ ಸಭೆಯಲ್ಲಿ ಅಭಿಪ್ರಾಯಪಟ್ಟರು.
12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಶೇ 8ರಿಂದ ಶೇ 8.5ರಷ್ಟು ವೃದ್ಧಿ ದರ ನಿರೀಕ್ಷಿಸಬಹುದು.
ಯೋಜನೆಯ ಮೊದಲ ವರ್ಷ (2012-13) ಶೇ 6.5ರಿಂದ ಶೇ 7ರಷ್ಟು ವೃದ್ಧಿ ಅಂದಾಜಿಸಲಾಗಿದೆ ಎಂದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ `ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಭೆಗೆ ಮುನ್ನ ರಾಜ್ಯ ಯೋಜನಾ ಮಂಡಳಿಗಳು ತಮ್ಮ ವರದಿ ಸಲ್ಲಿಸುವಂತೆ ಮೊಂಟೆಕ್ ಸಲಹೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.