ADVERTISEMENT

`ಡಿಸಿಬಿ' ಲಾಭ ರೂ 102ಕೋಟಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಬೆಂಗಳೂರು: `ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್ ಲಿ.' (ಡಿಸಿಬಿ) 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ34 ಕೋಟಿ ನಿವ್ವಳ ಲಾಭ ಗಳಿಸಿದೆ. 2011-12ರ ಜನವರಿ-ಮಾರ್ಚ್ ಅವಧಿಯಲ್ಲಿನ ನಿವ್ವಳ ಲಾಭ ರೂ17ಕೋಟಿಗೆ ಹೋಲಿಸಿದಲ್ಲಿ ಈ ಬಾರಿ ಉತ್ತಮ ಪ್ರಗತಿ ದಾಖಲಾಗಿದೆ.

ಒಟ್ಟು ಹಣಕಾಸು ವರ್ಷದಲ್ಲಿನ ನಿವ್ವಳ ಲಾಭವೂ ರೂ102 ಕೋಟಿಯಷ್ಟಾಗಿದೆ. ಹಿಂದಿನ ವರ್ಷದ ಲಾಭ ರೂ55 ಕೋಟಿಯಷ್ಟಿತ್ತು ಎಂದು `ಡಿಸಿಬಿ' ವ್ಯವಸ್ಥಾಪಕ ನಿರ್ದೇಶಕ ಮುರಳಿ ಎಂ.ನಟರಾಜನ್ ಹೇಳಿದ್ದಾರೆ.

ಮಾರ್ಚ್ 31ರ ವೇಳೆಗೆ ಬ್ಯಾಂಕ್‌ನ ಠೇವಣಿ ಮೊತ್ತ ರೂ8364 ಕೋಟಿ (ಶೇ 32 ಹೆಚ್ಚಳ), ಸಾಲ ವಿತರಣೆ ರೂ6586 ಕೋಟಿ (ಶೇ 25 ಅಧಿಕ) ಇದ್ದಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.