ADVERTISEMENT

ತೆರಿಗೆ ಸಂಗ್ರಹ ಹಿಂದೆ ಬಿದ್ದಿಲ್ಲ: ಸಿಎಂ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ): ‘ಗಣಿ ಮತ್ತು ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ಹಿನ್ನಡೆ ಆಗಿದ್ದರೂ, ಈ ವರ್ಷ ಒಟ್ಟಾರೆ ₨ ೯೮,೩೨೧ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಮುಟ್ಟುತ್ತೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿ ಯಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿರುವ ಕಾರಣ ಗಣಿಗಾರಿಕೆಯಿಂದ ಬರಬೇಕಾಗಿದ್ದ ತೆರಿಗೆಯಲ್ಲಿ ₨೧೫೦ ಕೋಟಿ ರೂಪಾಯಿ ಕಡಿಮೆ ಆಗಬ ಹುದು. ಅದೇ ರೀತಿ ಆರ್ಥಿಕ ಹಿಂಜರಿತ ದಿಂದಾಗಿ ಮೋಟಾರು ವಾಹನಗಳ ನೋಂದಣಿ ಇಳಿಮುಖ­ವಾಗಿ­ದೆ. ಇದ ರಿಂದಾಗಿ ಈ ಬಾಬ್ತಿನಲ್ಲಿ ₨ ೩೨೦ ಕೋಟಿ  ತೆರಿಗೆ ಕಡಿಮೆಯಾಗುವ ಅಂದಾಜು ಇದೆ ಎಂದರು.ತೆರಿಗೆಗಳಿಂದ ₨ ೯೮,೩೨೧ ಕೋಟಿ  ಆದಾಯ ಬರಲಿದೆ ಎಂದು ಅಂದಾಜಿಸ ಲಾಗಿತ್ತು. ಅಕ್ಟೋಬರ್ ತಿಂಗಳವರೆಗೆ ₨ ೪೬,೭೨೪ (ಶೇ ೪೮ರಷ್ಟು) ಕೋಟಿ ತೆರಿಗೆ ಸಂಗ್ರಹವಾ­ಗಿದೆ. ಕಳೆದ ವರ್ಷಕ್ಕೆ ಹೋಲಿ ಸಿದರೆ ಶೇ ೧೧.೫ರಷ್ಟು ಬೆಳವಣಿಗೆ ದರ ಇದೆ ಎಂದು ತಿಳಿಸಿದರು.

ರಾಜ್ಯದ ಮೂಲಗಳಿಂದ  ₨೩೭,೭೪೦ ಕೋಟಿ ತೆರಿಗೆ ಸಂಗ್ರಹವಾ­ಗುವ ಅಂದಾಜು ಮಾಡಲಾಗಿತ್ತು. ಅಕ್ಟೋಬರ್‌ವರೆಗೆ ₨೨೦,೩೩೪ (ಶೇಕಡಾ ೫೪ರಷ್ಟು) ಕೋಟಿ  ತೆರಿಗೆ ಸಂಗ್ರಹವಾ ಗಿದ್ದು, ಬೆಳವಣಿಗೆ ದರ ಶೇ ೧೩ರಷ್ಟಿದೆ. ಕೇರಳ (ಶೇ ೧೨), ಮಹಾರಾಷ್ಟ್ರ (ಶೇ ೭), ಆಂಧ್ರಪ್ರದೇಶ (ಶೇ ೬), ತಮಿಳುನಾಡಿಗೆ (ಶೇ ೪) ಹೋಲಿಸಿದರೆ ರಾಜ್ಯದಲ್ಲಿ ತೆರಿಗೆ ಸಂಗ್ರಹ ದರ ಜಾಸ್ತಿ ಇದೆ ಎಂದರು.

ಅಬಕಾರಿ ತೆರಿಗೆಯಿಂದ ₨೭೨೪೦ (ಶೇ ೫೭) ಕೋಟಿ, ಮೋಟಾರು ವಾಹನ ತೆರಿಗೆಯಿಂದ ₨೨೦೫೮ (ಶೇ ೫೦) ಕೋಟಿ ಸಂಗ್ರಹವಾಗಿದೆ. ಪಂಚಾ­ಯತ್ ರಾಜ್ ಸಂಸ್ಥೆಗಳಿಗೆ ₨೧೬,೨೯೬ ಕೋಟಿ  ಅನುದಾನ ನೀಡಲಾಗಿದೆ. ೧೦.೫ ಲಕ್ಷ ರೈತರಿಗೆ ₨೪೩೦೦ ಕೋಟಿ ಸಾಲ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.