ADVERTISEMENT

ತೆರಿಗೆ ಹೇರಿಕೆ: 12 ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಶಿವಮೊಗ್ಗ: ಸಹಕಾರಿ ಸಂಸ್ಥೆಗಳ ಮೇಲೆ ಶೇ 33ರಷ್ಟು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಉದ್ದೇಶಿತ `ನೇರ ತೆರಿಗೆ ನೀತಿ ಸಂಹಿತೆ ಮಸೂದೆ~ ವಿರೋಧಿಸಿ ರಾಜ್ಯದಾದ್ಯಂತ ಮಾರ್ಚ್ 12ರಂದು ವ್ಯವಹಾರ ಸ್ಥಗಿತಗೊಳಿಸಿ, ಪ್ರತಿಭಟಿಸಲಾಗುವುದು ಎಂದು ಸಹಕಾರ ಭಾರತಿ ರಾಜ್ಯ ಘಟಕದ ಅಧ್ಯಕ್ಷ ನರಸಿಂಹನಾಯ್ಕ ತಿಳಿಸಿದರು.

ಸಹಕಾರಿ ಸಂಸ್ಥೆಗಳು ತಮ್ಮ ಸದಸ್ಯರ ಅಭಿವೃದ್ಧಿಗೋಸ್ಕರ ಆರ್ಥಿಕ ಚಟುವಟಿಕೆಗಳನ್ನು ಮತ್ತು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಅವುಗಳು ಸೇವೆಯ ಉದ್ದೇಶ ಹೊಂದಿವೆಯೇ ಹೊರತು ಲಾಭದ ದೃಷ್ಟಿಕೋನ ಹೊಂದಿಲ್ಲ. ಇವು ಕಂಪೆನಿಗಳೂ ಅಲ್ಲ. ಇಂತಹ ಸಂಸ್ಥೆಗಳ ಮೇಲೆ   ತೆರಿಗೆ ವಿಧಿಸುವುದನ್ನು ವಿರೋಧಿಸಬೇಕಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.