ADVERTISEMENT

‘ದೀಪಾವಳಿ: ಚೀನಾದ ಸರಕುಗಳಿಗೆ ಬೇಡಿಕೆ ತಗ್ಗಲಿದೆ’

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST

ನವದೆಹಲಿ: ಈ ಬಾರಿ ದೀಪಾವಳಿಗೆ ದೇಶದಲ್ಲಿಯೇ ತಯಾರಾಗಿರುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹಾಗಾಗಿ ಚೀನಾದ ಸರಕುಗಳು ಬೇಡಿಕೆ ಕಳೆದುಕೊಳ್ಳಲಿವೆ ಎಂದು ವರದಿಯೊಂದು ತಿಳಿಸಿದೆ.

ಭಾರತೀಯರು ದೇಶದಲ್ಲಿಯೇ ತಯಾರಾಗಿರುವ ವಸ್ತುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಚೀನಾದ ದೀಪಗಳು, ಲ್ಯಾಂಪ್‌, ಉಡುಗೊರೆ ವಸ್ತುಗಳ ಮಾರಾಟ ಶೇ 40 ರಿಂದ ಶೇ 45 ರಷ್ಟು ಇಳಿಕೆ ಕಾಣಲಿದೆ ಎಂದು ಅಸೋಚಾಂ ಮತ್ತು ಸೋಷಿಯಲ್ ಡೆವಲಪ್‌ಮೆಂಟ್ ಫೌಂಡೇಶನ್ ಜಂಟಿ ವರದಿ ನೀಡಿವೆ.

ಬೆಂಗಳೂರು, ಅಹಮದಾಬಾದ್‌, ಚೆನ್ನೈ, ದೆಹಲಿ, ಹೈದರಾಬಾದ್‌, ಜೈಪುರ, ಲಖನೌ ಮತ್ತು ಮುಂಬೈನಲ್ಲಿ ಇರುವ ಚಿಲ್ಲರೆ ಮತ್ತು ಸಗಟು ವರ್ತಕರಿಂದ ಈ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಿವೆ.

ADVERTISEMENT

ವಿದ್ಯುತ್‌ ಉಪಕರಣಗಳ ಬೇಡಿಕೆ ಶೇ 15 ರಿಂದ ಶೇ 20ರವರೆಗೂ ತಗ್ಗಲಿದೆ ಎಂದು ತಿಳಿಸಿವೆ. 2016ರಲ್ಲಿ ದೀಪಾವಳಿ ಸಂದರ್ಭದಲ್ಲಿ ಚೀನಾದಲ್ಲಿ ತಯಾರಾಗಿರುವ ₹6,500 ಕೋಟಿ ಮೌಲ್ಯದ ವಸ್ತುಗಳು ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.