ADVERTISEMENT

ದೆಹಲಿ: ಈರುಳ್ಳಿ ಮತ್ತೆ ರೂ 70ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): ಈರುಳ್ಳಿ ಧಾರಣೆ ನವದೆಹಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ರೂ10ರಷ್ಟು ಏರಿಕೆ ಕಾಣುವ ಮೂಲಕ ಕೆ.ಜಿಗೆ ಮತ್ತೆ ರೂ70ರ ಮಟ್ಟ ಮುಟ್ಟಿದೆ.

ಕಳೆದೊಂದು ವಾರದಿಂದ ಈರುಳ್ಳಿ ಆವಕ ತಗ್ಗಿದೆ. ಹಾಗಾಗಿ ಸಗಟು ಮಾರುಕಟ್ಟೆಯಲ್ಲಿಯೇ ಸದ್ಯ ಈರುಳ್ಳಿ ಬೆಲೆ ಕೆ.ಜಿಗೆ ರೂ60ರಷ್ಟಿದೆ. ಚಿಲ್ಲರೆ ವಹಿವಾಟಿನಲ್ಲಿ ಮತ್ತು ಬೀದಿಗಳಲ್ಲಿನ ಮಾರಾಟಗಾರರು ಕೆ.ಜಿ.ಗೆ ರೂ70ರಿಂದ ರೂ80ರವರೆಗೂ ಮಾರಾಟ ಮಾಡುತ್ತಿದ್ದಾರೆ ಎಂದು ಸಗಟು ವರ್ತಕರು ಮಂಗಳವಾರ ತಿಳಿಸಿದ್ದಾರೆ.

ಬೆಂಗಳೂರು ಸಗಟು
ಬೆಂಗಳೂರಿನ ಸಗಟು ಮಾರುಕಟ್ಟೆ ಯಲ್ಲಿ ದಪ್ಪ ಗಾತ್ರದ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ ರೂ5000ದಿಂದ 5600ರಷ್ಟಿದ್ದರೆ, ಮಧ್ಯಮ ಗಾತ್ರದ್ದು ರೂ2500ರಿಂದ 4200 ಹಾಗೂ ಸಣ್ಣ ಈರುಳ್ಳಿ ರೂ1200ರಿಂದ 2800ರ ಮಟ್ಟದಲ್ಲಿ ವಹಿವಾಟಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.