ADVERTISEMENT

ದೇಶದ ಅರ್ಥ ವ್ಯವಸ್ಥೆ ಸದೃಢ: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಹೈದರಾಬಾದ್(ಪಿಟಿಐ): ದೇಶದ ಆರ್ಥಿಕ ವ್ಯವಸ್ಥೆ ಬಹಳ ದೃಢವಾಗಿದೆ. ಇದು ಮುಂದಿನ ಜೂನ್‌ನಲ್ಲಿ ಮಂಡನೆಯಾಗಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ಸ್ಥಿರತೆ ಕುರಿತ ವರದಿಯಲ್ಲಿ ಸ್ಪಷ್ಟವಾಗಲಿದೆ ಎಂದು ಆರ್‌ಬಿಐ ಪ್ರತಿಕ್ರಿಯಿಸಿದೆ.

ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆರ್‌ಬಿಐ ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ, ದೇಶದ ವಾಸ್ತವ ಆರ್ಥಿಕ ಪರಿಸ್ಥಿತಿಯನ್ನು ಆರ್‌ಬಿಐ ವರದಿ ಖಚಿತಪಡಿಸಲಿದೆ ಎಂದರು.`ಸ್ಟಾಂಡರ್ಡ್ ಅಂಡ್ ಪೂರ್~ ಭಾರತದ ಆರ್ಥಿಕ ಮುನ್ನೋಟದ ಬಗ್ಗೆ ಋಣಾತ್ಮಕ ರೇಟಿಂಗ್ ನೀಡಿದ ಒಂದು ದಿನದ ನಂತರ ಆರ್‌ಬಿಐ ಪ್ರತಿಕ್ರಿಯಿಸಿದೆ.

ನಗದು ಮಾರುಕಟ್ಟೆಯಲ್ಲಿಯೂ ಭಾರಿ ಏರಿಳಿತ ಕಂಡುಬಂದಾಗಲಷ್ಟೇ ಆರ್‌ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ ಎಂದು ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.