ADVERTISEMENT

ನಕಲಿ ಕೀಟನಾಶಕ ಮಾರಾಟ...

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಪ್ರತಿ ವರ್ಷವೂ ದೇಶದಲ್ಲಿ 3,000 ಕೋಟಿ ಮೌಲ್ಯದ ನಕಲಿ ಕೀಟನಾಶಕಗಳು ಮಾರಾಟವಾಗುತ್ತಿದ್ದು, ಬೆಳೆ ನಷ್ಟಕ್ಕೆ ಕಾರಣವಾಗುತ್ತಿವೆ ಎಂದು  ರಾಷ್ಟ್ರೀಯ ಕೃಷಿ ಹಾಗೂ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಆರ್.ಬಿ.ಸಿಂಗ್ ಹೇಳಿದ್ದಾರೆ.

ದೇಶದಲ್ಲಿ ವಾರ್ಷಿಕವಾಗಿ 80,000 ಟನ್ ಕೀಟನಾಶಕಗಳನ್ನು ಉತ್ಪಾದಿಸಲಾಗುತ್ತಿದ್ದು, ಒಟ್ಟು 7,000 ಕೋಟಿ  ವಹಿವಾಟು ನಡೆಯುತ್ತದೆ. ಒಟ್ಟು ಕೀಟನಾಶಕಗಳಲ್ಲಿ ಶೇ 40 ರಷ್ಟು ನಕಲಿ ಕೀಟನಾಶಕಗಳು ಮಾರಾಟವಾಗುತ್ತಿವೆ.

ಕೀಟನಾಶಕಗಳನ್ನು ವಿವೇಚನೆಯಿಂದ ಬಳಸಿದರೆ ದೇಶದಲ್ಲಿ ವಾರ್ಷಿಕವಾಗಿ 2.5 ಲಕ್ಷ  ಮೌಲ್ಯದ ಆಹಾರಧಾನ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.