ಬೆಂಗಳೂರು: ರಾಜ್ಯದಲ್ಲಿನ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಮತ್ತು ಕೃಷಿ ಸಾಲದ ಉದ್ದೇಶಕ್ಕೆ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದ ಹಣಕಾಸು ನೆರವು ನೀಡಿದೆ.
ಬ್ಯಾಂಕ್, ಸರ್ಕಾರೇತರ ಸ್ವಯಂ ಸೇವಾ ಸಂಘಟನೆ ಮತ್ತು ರಾಜ್ಯ ಸರ್ಕಾರಕ್ಕೆ 2011-12ನೇ ಸಾಲಿನಲ್ಲಿರೂ6,053 ಕೋಟಿಗಳಷ್ಟು ನೆರವು ನೀಡಲಾಗಿದೆ. ಇದು 2010-11ನೇ ಸಾಲಿಗೆ ಹೋಲಿಸಿದರೆ ಶೇ 40 ರಷ್ಟು ಹೆಚ್ಚಳ ದಾಖಲಿಸಿದೆ ಎಂದು `ನಬಾರ್ಡ್~ನ ಚೀಫ್ ಜನರಲ್ ಮ್ಯಾನೇಜರ್ ಎಸ್. ಎನ್. ಎ. ಜಿನ್ನಾ, ಇತ್ತೀಚೆಗೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರಿ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ (ಆರ್‌ಆರ್‌ಬಿ) ಉತ್ಪಾದನಾ ಸಾಲ ಮರು ಹಣಕಾಸು ಸೌಲಭ್ಯವನ್ನುರೂ3,775 ಕೋಟಿಗಳವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರು ಯಾವುದೇ ಅಡ್ಡಿ ಆತಂಕ ಇಲ್ಲದೇ ಬೆಳೆ ಸಾಲ ಪಡೆಯಲು ಸಾಧ್ಯವಾಗಿದೆ ಎಂದರು.
ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರಕ್ಕೆರೂ739 ಕೋಟಿಗಳ ನೆರವು ನೀಡಲಾಗಿದೆ. ಇದರಿಂದ ಗ್ರಾಮೀಣ ರಸ್ತೆ ಸಂಪರ್ಕ, ನೀರಾವರಿ ಮತ್ತು ಸಾಮಾಜಿಕ ವಲಯಗಳಿಗೆ ಹೆಚ್ಚಿನ ಪ್ರಯೋಜನ ದೊರೆತಿದೆ. ವಿವಿಧ ಬ್ಯಾಂಕ್‌ಗಳಿಗೆರೂ1,345 ಕೋಟಿಗಳಷ್ಟು ಮರು ಹಣಕಾಸು ನೆರವು ನೀಡಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ 37ರಷ್ಟು ಏರಿಕೆ ಕಂಡಿದೆ.
ಹೊಸದಾಗಿ ಆರಂಭಿಸಿರುವ `ನಬಾರ್ಡ್ ಮೂಲ ಸೌಕರ್ಯ ಅಭಿವೃದ್ಧಿ ನೆರವು~ ಯೋಜನೆಯಡಿ, ಗೋದಾಮುಗಳ ನಿರ್ಮಾಣಕ್ಕೆ ರಾಜ್ಯ ಉಗ್ರಾಣ ನಿಗಮಕ್ಕೆರೂ42 ಕೋಟಿ, ಏತ ನೀರಾವರಿ ಯೋಜನೆ ಕೈಗೊಳ್ಳಲು `ಕೃಷ್ಣಾ ಭಾಗ್ಯ ಜಲ ನಿಗಮ~ಕ್ಕೆರೂ244 ಕೋಟಿ ಮತ್ತು 11 ಸಾವಿರ ಸ್ವ ಸೇವಾ ಗುಂಪುಗಳಿಗೆ 200 ಕೋಟಿಗಳಷ್ಟು ಹಣಕಾಸು ನೆರವು ಒದಗಿಸಲಾಗಿದೆ.
`ಹಣಕಾಸು ಸೇರ್ಪಡೆ~ ಕಾರ್ಯಕ್ರಮಗಳ ಜಾರಿಗಾಗಿ ಕಾವೇರಿ ಕಲ್ಪತರು ಮತ್ತು ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್‌ಗಳಿಗೂ ಹಣಕಾಸು ನೆರವು ನೀಡಲಾಗಿದೆ ಎಂದು ಜಿನ್ನಾ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.