ADVERTISEMENT

ನಿರ್ದೇಶಕ ಮಂಡಳಿ: ವನಿತೆಯರ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಕಾರ್ಪೊರೇಟ್‌ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಸಚಿನ್‌ ಪೈಲಟ್‌ ಸೋಮವಾರ ರಾಜ್ಯ ಸಭೆಗೆ ನೀಡಿರುವ ಮಾಹಿತಿ ಪ್ರಕಾರ, 2013ರ ನವೆಂಬರ್‌ವರೆಗೆ ದೇಶದ ವಿವಿಧ ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಒಟ್ಟು 4.83 ಲಕ್ಷ ವನಿತೆಯರಿದ್ದಾರೆ.

ಕಂಪೆನಿ ವ್ಯವಹಾರಗಳ ಸಚಿವಾ­­ಲಯ ದಲ್ಲಿ 13.29 ಲಕ್ಷ ಕಂಪೆನಿ­ಗಳು ನೋಂದಣಿಯಾಗಿವೆ. ಇದರಲ್ಲಿ 8.84 ಲಕ್ಷ ಕಂಪೆನಿಗಳು ಮಾತ್ರ ಈಗ ಕಾರ್ಯ ನಿರ್ವ­ಹಿಸು­ತ್ತಿವೆ. 2013ರ ಕಂಪೆನಿ ಕಾಯ್ದೆ ಅನ್ವಯ ಪ್ರತಿ ಕಂಪೆ­ನಿಯು ತನ್ನ ನಿರ್ದೇ­ಶಕ ಮಂಡಳಿಯಲ್ಲಿ ಕನಿಷ್ಠ ಒಬ್ಬ ಮಹಿಳೆಯನ್ನಾದರೂ ಹೊಂದಿರಬೇಕು. ಪ್ರಸ್ತುತ ಹಲವು ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯ­ರಿದ್ದಾರೆ ಎಂದು ಸಚಿನ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.