ADVERTISEMENT

ನ್ಯೂಮೆರಿಕ್‌ನಿಂದ 3 ಹೊಸ ಉಪಕರಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ನ್ಯೂಮೆರಿಕ್‌ನಿಂದ 3 ಹೊಸ ಉಪಕರಣ
ನ್ಯೂಮೆರಿಕ್‌ನಿಂದ 3 ಹೊಸ ಉಪಕರಣ   

ಬೆಂಗಳೂರು: ಯುಪಿಎಸ್‌ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನ್ಯೂಮೆರಿಕ್ ಸಂಸ್ಥೆಯು ಶೀಘ್ರದಲ್ಲಿಯೇ ಮೂರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

‘ಸಂಸ್ಥೆ ಹೊರತರುತ್ತಿರುವ ಈ ಹೊಸ ಯುಪಿಎಸ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿವೆ’ ಎಂದು ಸಂಸ್ಥೆಯ ಮುಖ್ಯ ಕಾರ್ಪೊರೇಟ್‌ ಅಧಿಕಾರಿ ಪಲಶ್‌ ನ್ಯಾಂಡಿ, ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸ್ಥೆಯು ‘ಲೈನ್‌ ಇಂಟರ್‌ಆ್ಯಂಕ್ವಿವ್‌’ ಮತ್ತು ‘ಸಿಂಗಲ್‌ ಫೇಸ್‌’ ಮಾದರಿ ಯುಪಿಎಸ್‌ ಉಪಕರಣಗಳ ತಯಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಹೊಸ ಉಪಕರಣಗಳ ಮೂಲಕ ‘ಥ್ರೀ ಫೇಸ್ ಮಾದರಿ ಯುಪಿಎಸ್‌ ಮತ್ತು ಬ್ಯಾಟರಿ ಉಪಕರಣಗಳ ತಯಾರಿಕೆಯಲ್ಲೂ ಮುಂಚೂಣಿಗೆ ಬರುವುದು ಸಂಸ್ಥೆಯ ಉದ್ದೇಶವಾಗಿದೆ’ ಎಂದರು.

ADVERTISEMENT

‘ಮುಂಬರುವ ದಿನಗಳಲ್ಲಿ ಸಂಸ್ಥೆಯ ವಹಿವಾಟನ್ನು ಶೇ 2ರಷ್ಟು ಹೆಚ್ಚಳ ಮಾಡುವ ಗುರಿ ಹೊಂದಿದ್ದೇವೆ. ಹೊಸ ಉತ್ಪನ್ನಗಳು ಆಧುನಿಕ ತಂತ್ರಜ್ಞಾನವಷ್ಟೇ ಅಲ್ಲದೆ, ಗ್ರಾಹಕ ಸ್ನೇಹಿಯಾಗಿದ್ದು, ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಗಳಿದ್ದರೆ ನಿವಾರಿಸಬಲ್ಲವು. ಜತೆಗೆ ಕಡಿಮೆ ವಿದ್ಯುತ್‌ ಬಳಸುತ್ತವೆ.

‘ಸಂಸ್ಥೆಯು 2012ರಲ್ಲಿ ಲೆಗ್ರಾಂಡ್‌ ಸಂಸ್ಥೆ ಜತೆ ಕೈಜೋಡಿಸಿದ್ದು, ಅದರ ಸಹಯೋಗದೊಂದಿಗೆ ಉತ್ತಮ ಗುಣಮಟ್ಟದ ಯುಪಿಎಸ್‌ ಮತ್ತು ಬ್ಯಾಟರಿಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ.

‘ನಮ್ಮಿಂದ ಯುಪಿಎಸ್‌ ಖರೀದಿಸುವ ಗ್ರಾಹಕರಿಗೆ ಉತ್ತಮ ಸೇವೆಯನ್ನೂ ಒದಗಿಸುತ್ತಿದ್ದೇವೆ. ಇದಕ್ಕೆಂದೇ  ದೇಶದಾದ್ಯಂತ 254 ಸೇವಾ ಕೇಂದ್ರಗಳಿವೆ. ಹೀಗಾಗಿಯೇ ನಮ್ಮ ಸಂಸ್ಥೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ‘ಮನೆ, ರೆಸ್ಟೊರಂಟ್‌, ಹೋಟೆಲ್‌, ಕಾರ್ಖಾನೆ, ಆಸ್ಪತ್ರೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಯುಪಿಎಸ್‌ ಮತ್ತು ಬ್ಯಾಟರಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.