ADVERTISEMENT

ಪಾಲು ಮಾರಾಟ: ಪ್ರೇಮ್‌ಜೀ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಪಾಲು ಮಾರಾಟ: ಪ್ರೇಮ್‌ಜೀ ನಿರಾಕರಣೆ
ಪಾಲು ಮಾರಾಟ: ಪ್ರೇಮ್‌ಜೀ ನಿರಾಕರಣೆ   

ಬೆಂಗಳೂರು: ವಿಪ್ರೊ ಅಥವಾ ಅದರ ಕೆಲ ಘಟಕಗಳನ್ನು ಮಾರಾಟ ಮಾಡಲು ಸಂಸ್ಥೆಯ ಪ್ರವರ್ತಕರು ಆಲೋಚಿಸುತ್ತಿದ್ದಾರೆ ಎನ್ನುವ ವರದಿಗಳನ್ನು ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

‘ದೇಶದ ಮೂರನೇ ಅತಿದೊಡ್ಡ ಐ.ಟಿ ಸಂಸ್ಥೆಯ ಪ್ರವರ್ತಕರು ಸಂಸ್ಥೆಯಲ್ಲಿನ ತಮ್ಮ ಪಾಲು ಬಂಡವಾಳ ಮಾರಾಟ ಮಾಡಲು ಸಂಪತ್ತಿನ ಮೌಲ್ಯಮಾಪನ ಮಾಡುತ್ತಿದ್ದಾರೆ ಎನ್ನುವ ಪತ್ರಿಕಾ ವರದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.

‘ಪತ್ರಿಕಾ ವರದಿಗಳು ಆಧಾರರಹಿತ ಮತ್ತು ದುರುದ್ದೇಶದಿಂದ ಕೂಡಿವೆ’ ಎಂದು ಅವರು ಸಂಸ್ಥೆಯ ಸಿಬ್ಬಂದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಅಂತರ್ಜಾಲ ಸುದ್ದಿ ತಾಣವೊಂದು ಸೋಮವಾರ, ಬ್ಯಾಂಕಿಂಗ್‌ ಮೂಲಗಳನ್ನು ಉದ್ಧರಿಸಿ  ಈ ವರದಿ ಪ್ರಕಟಿಸಿತ್ತು.  ಸಂಸ್ಥೆಯು ಈ ಸಂಬಂಧ  ಹೂಡಿಕೆ ಬ್ಯಾಂಕನ್ನು ಸಂಪರ್ಕಿಸಿದೆ ಎಂದೂ ವರದಿ ಮಾಡಿತ್ತು.  ‘50 ವರ್ಷಗಳಲ್ಲಿ ಸಂಸ್ಥೆಯು ಪ್ರಾದೇಶಿಕ ಖಾದ್ಯ ತೈಲ ತಯಾರಿಕೆಯಿಂದ ಜಾಗತಿಕ ಐ.ಟಿ ಸಂಸ್ಥೆಯಾಗಿ ಬೃಹದಾಕಾರವಾಗಿ ಬೆಳೆದಿರುವುದನ್ನು ನಾನು ನೋಡಿದ್ದೇನೆ. ಐ.ಟಿ ಉದ್ದಿಮೆ ಮತ್ತು ವಿಪ್ರೊ ಸಂಸ್ಥೆಯ  ಬೆಳವಣಿಗೆಗೆ ಇನ್ನೂ ಸಾಕಷ್ಟು  ಅವಕಾಶಗಳಿವೆ. ಸಂಸ್ಥೆಗೆ ನಾನು ಬದ್ಧನಾಗಿರುವೆ’ ಎಂದು ಪ್ರೇಮ್‌ಜೀ ಅವರು ಪತ್ರದಲ್ಲಿ ತಿಳಿಸಿದ್ದಾರೆ.

73.25 %
ವಿಪ್ರೊದಲ್ಲಿರುವ ಪ್ರೇಮ್‌ಜೀ ಮತ್ತು ಅವರ ಕುಟುಂಬದ ಸದಸ್ಯರ ಪಾಲು ಬಂಡವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.