ADVERTISEMENT

ಪೆಟ್ರೋಲ್‌ ದರ 60 ಪೈಸೆ, ಡೀಸೆಲ್‌ 56 ಪೈಸೆ ಇಳಿಕೆ

ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್‌ ದರ ₹77.83, ಬೆಂಗಳೂರಿನಲ್ಲಿ ₹79.10

ಏಜೆನ್ಸೀಸ್
Published 30 ಮೇ 2018, 5:03 IST
Last Updated 30 ಮೇ 2018, 5:03 IST
ಪೆಟ್ರೋಲ್‌ ದರ 60 ಪೈಸೆ, ಡೀಸೆಲ್‌ 56 ಪೈಸೆ ಇಳಿಕೆ
ಪೆಟ್ರೋಲ್‌ ದರ 60 ಪೈಸೆ, ಡೀಸೆಲ್‌ 56 ಪೈಸೆ ಇಳಿಕೆ   

ನವದೆಹಲಿ: ಹದಿನಾರು ದಿನಗಳು ಸತತ ಏರಿಕೆ ಕಂಡ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಬುಧವಾರ ಅತ್ಯಲ್ಪ ಇಳಿಕೆ ಕಂಡಿದೆ.

ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲೇ ಪ್ರತಿ ಲೀಟರ್‌ ಪೆಟ್ರೋಲ್‌ ದರವನ್ನು 60 ಪೈಸೆ ಹಾಗೂ ಡೀಸೆಲ್‌ ದರದಲ್ಲಿ 56 ಪೈಸೆ ಕಡಿಮೆ ಮಾಡಲಾಗಿದೆ.

ಮಂಗಳವಾರ ಪೆಟ್ರೋಲ್‌ ದರ ₹78.43 ತಲುಪುವ ಮೂಲಕ ಈ ವರೆಗಿನ ಅತಿ ಹೆಚ್ಚು ದರಮಟ್ಟ ತಲುಪಿತ್ತು. ಪೆಟ್ರೋಲ್‌ ದರ ಕಡಿತದ ಬಳಿಕ ದೆಹಲಿಯಲ್ಲಿ ಪೆಟ್ರೋಲ್‌ ದರ ₹77.83 ಆಗಿದೆ.

ADVERTISEMENT

₹69.31 ತಲುಪಿದ್ದ ಪ್ರತಿ ಲೀಟರ್‌ ಡೀಸೆಲ್‌ ದರ ₹68.75 ಆಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೈಲ ದರ ಏರಿಕೆಗೆ ಒಡ್ಡಿಕೊಂಡಿದ್ದ ತಡೆಯು ಮೇ 14ರಿಂದ ಮುಕ್ತಗೊಂಡಿತ್ತು. ಎರಡು ವಾರಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ ದರ ₹3.8 ಹಾಗೂ ಪ್ರತಿ ಲೀಟರ್‌ ಡೀಸೆಲ್‌ ದರ ₹3.38ರಷ್ಟು ಏರಿಕೆ ಕಂಡಿತ್ತು.

ಸ್ಥಳೀಯ ತೆರಿಗೆ ಅಥವಾ ವ್ಯಾಟ್‌ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸವಿದೆ. ಮಹಾನಗರಗಳ ಪೈಕಿ ದೆಹಲಿ ಅತಿ ಕಡಿಮೆ ತೈಲ ದರವನ್ನು ಹೊಂದಿದೆ. ಮುಂಬೈನಲ್ಲಿ ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್‌ ದರ ₹85.65 ಹಾಗೂ ಡೀಸೆಲ್ ದರ ₹73.20 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.