ADVERTISEMENT

ಪ್ರತಿದಿನ 264 ಹೊಸ ಕಂಪೆನಿ ನೋಂದಣಿ!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ):  ಭಾರತೀಯ­ರಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಯಮ ಆರಂಭಿ ಸುವ ಉಮೇದು ಹೆಚ್ಚುತ್ತಿದೆ. ಜನವರಿ ಯಲ್ಲಿ ದಿನಕ್ಕೆ ತಲಾ 264 ಕಂಪೆನಿಗಳಂತೆ ಹೊಸ ಉದ್ಯಮ ಸಂಸ್ಥೆಗಳು ನೋಂದಣಿ ಯಾಗಿವೆ.

ಇಡೀ ತಿಂಗಳಲ್ಲಿ ದೇಶದಲ್ಲಿ ಒಟ್ಟು 8,206 ಹೊಸ ವಾಣಿಜ್ಯ, ಉದ್ಯಮ ಸಂಸ್ಥೆಗಳು ನೋಂದಣಿ ಆಗಿ ಕಾರ್ಯಾ ರಂಭ ಮಾಡಿವೆ!
ಕಂಪೆನಿಗಳೇನೋ ಹೆಚ್ಚಿನ ಸಂಖ್ಯೆ ಯಲ್ಲಿ ಕಾರ್ಯಾರಂಭ ಮಾಡಿದ್ದರೂ ಇವುಗಳೆಲ್ಲದರ ಒಟ್ಟಾರೆ ಬಂಡವಾಳ ₨943.21 ಕೋಟಿಯಷ್ಟಿದೆ.

ಕಂಪೆನಿ ವ್ಯವಹಾರಗಳ ಸಚಿವಾಲ ಯದ ಅಧೀನ ಇಲಾಖೆಯಲ್ಲಿ, ಭಾರ­ತೀಯ ಕಂಪೆನಿ ಕಾಯ್ದೆಯಡಿ ಈ ಹೊಸ ಉದ್ಯಮ ಸಂಸ್ಥೆಗಳು ನೋಂದ­ಣಿ ಆಗಿವೆ. ನಿಯಮಿತ ಷೇರು ಬಂಡ­ವಾ­ಳದ ಮೂಲಕ ಆರಂಭಗೊಂಡಿ­ರುವ ನೂತನ ಕಂಪೆನಿಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರ ದಲ್ಲಿ ಆರಂಭಗೊಳ್ಳುತ್ತಿವೆ ಎಂಬುದು ವಿಶೇಷ.

ಮಹಾರಾಷ್ಟ್ರದಲ್ಲಿ 1563, ದೆಹಲಿ 1356, ಉತ್ತರ ಪ್ರದೇಶ 741 ಹೊಸ ಉದ್ಯಮ ಸಂಸ್ಥೆಗಳು ಜನವರಿಯಲ್ಲಿ ನೋಂದಣಿಯಾಗಿವೆ. ಇದರೊಂದಿಗೆ ದೇಶದಲ್ಲಿನ ನೋಂದಾಯಿತ ಉದ್ಯಮ ಸಂಸ್ಥೆಗಳ ಸಂಖ್ಯೆ ಜನವರಿ ಮಾಸಾಂತ್ಯ ವೇಳೆಗೆ 13.77 ಲಕ್ಷಕ್ಕೇರಿದಂತಾಗಿದೆ. ಇವುಗಳಲ್ಲಿ 9.37 ಕಂಪೆನಿಗಳು ಮಾತ್ರ ಸದ್ಯ ಚಟುವಟಿಕೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.