ADVERTISEMENT

ಪ್ರಯಾಣಿಕ ವಾಹನ ರಫ್ತು ಮಾರುತಿಗೆ ಅಗ್ರ ಸ್ಥಾನ

ಪಿಟಿಐ
Published 23 ಅಕ್ಟೋಬರ್ 2017, 19:40 IST
Last Updated 23 ಅಕ್ಟೋಬರ್ 2017, 19:40 IST
ಪ್ರಯಾಣಿಕ ವಾಹನ ರಫ್ತು ಮಾರುತಿಗೆ ಅಗ್ರ ಸ್ಥಾನ
ಪ್ರಯಾಣಿಕ ವಾಹನ ರಫ್ತು ಮಾರುತಿಗೆ ಅಗ್ರ ಸ್ಥಾನ   

ನವದೆಹಲಿ: ಆರ್ಥಿಕ ವರ್ಷದ ಮೊದಲ 6 ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ರಫ್ತು ವಹಿವಾಟಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಮೊದಲ ಸ್ಥಾನಕ್ಕೇರಿದೆ.

ಈ ಮೊದಲು ಹುಂಡೈ ಮೋಟಾರ್ ಇಂಡಿಯಾ ಕಂಪೆನಿ ಮೊದಲ ಸ್ಥಾನದಲ್ಲಿತ್ತು. ಅದು ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ ಮಾರುತಿ 57,300 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 54,008 ವಾಹನಗಳನ್ನು ರಫ್ತು ಮಾಡಿತ್ತು. ಅಂದರೆ ಶೇ 6 ರಷ್ಟು ಪ್ರಗತಿ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.

ADVERTISEMENT

ಹುಂಡೈ ರಫ್ತು 63,014 ರಿಂದ 44,585ಕ್ಕೆ ಭಾರಿ ಇಳಿಕೆ ಕಂಡಿದೆ.  ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ನಿಸಾನ್‌ ಈ ಬಾರಿ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಫೋಕ್ಸ್‌ವ್ಯಾಗನ್ ಇಂಡಿಯಾ ಎರಡನೇ ಸ್ಥಾನಕ್ಕೇರಿದೆ.  ಮೇ 18 ರಿಂದ ಭಾರತದಲ್ಲಿ ವಾಹನ ಮಾರಾಟ ನಿಲ್ಲಿಸಿರುವ ಜನರಲ್ ಮೋಟಾರ್ಸ್ ಇಂಡಿಯಾ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿರುವುದು ಆಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.