ADVERTISEMENT

ಫಿಲಿಪ್ಪೀನ್ಸ್‌ಗೆ ಐಟಿ ಕಂಪೆನಿಗಳ ವಲಸೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಬೆಂಗಳೂರು (ಪಿಟಿಐ): ಮೂಲಸೌಕರ್ಯ ಕೊರತೆಯಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಹಲವು ಐ.ಟಿ ಮತ್ತು ಐ.ಟಿ ಆಧಾರಿತ ಮಧ್ಯಮ ಕಂಪೆನಿಗಳು ಫಿಲಿಪ್ಪೀನ್ಸ್‌ಗೆ ವಲಸೆ ಹೋಗುವ ಆಲೋಚನೆ ಹೊಂದಿವೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿದೆ.

ಫಿಲಿಪ್ಪೀನ್ಸ್‌ನಲ್ಲಿ ಸುಲಲಿತವಾಗಿ ಇಂಗ್ಲೀಷ್ ಮಾತನಾಡಬಲ್ಲ, ಕೌಶಲ್ಯ ಹೊಂದಿದ ಹಾಗೂ ಅಗ್ಗದ ದರದ ಮಾನವ ಸಂಪನ್ಮೂಲದ ಲಭ್ಯತೆ  ಹೆಚ್ಚಿದೆ. ಮೂಲಸೌಕರ್ಯ ಸೌಲಭ್ಯವೂ  ಉತ್ತಮವಾಗಿದೆ. ಈ ಎಲ್ಲ ಕಾರಣಗಳಿಂದ ಮುಖ್ಯವಾಗಿ ಬೆಂಗಳೂರಿನ ಹೊರಗುತ್ತಿಗೆ  ಸೇರಿದಂತೆ ಐ.ಟಿ ಆಧಾರಿತ ಚಿಕ್ಕ ಕಂಪೆನಿಗಳು ಅಲ್ಲಿಗೆ ವಲಸೆ ಹೋಗಲು ಬಯಸುತ್ತಿವೆ ಎಂದು `ಅಸೋಚಾಂ~ ಕಾರ್ಯದರ್ಶಿ ಎಸ್.ಡಿ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು  ಎಂದೂ `ಅಸೋಚಾಂ~ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.