ಬೆಂಗಳೂರು: ಫೆಡರಲ್ ಬ್ಯಾಂಕ್ ಏಕಕಾಲಕ್ಕೆ 100 ಶಾಖೆಗಳನ್ನು ಆರಂಭಿಸುವ ಮೂಲಕ ತನ್ನ ಸಂಪರ್ಕ ಜಾಲ ವಿಸ್ತರಿಸಿದೆ. ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಸೇವೆಯನ್ನು ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಒದಗಿಸುವುದು ನೂತನ ಶಾಖೆಗಳ ಆರಂಭದ ಉದ್ದೆೀಶವಾಗಿದೆ.
ಈ ಮೂಲಕ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 938ಕ್ಕೆ ಏರಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ತಿಳಿಸಿದ್ದಾರೆ.
ಬ್ಯಾಂಕ್ ತನ್ನ ಬೆಂಗಳೂರು ವಲಯದಲ್ಲಿ - ಕರ್ನಾಟಕದಲ್ಲಿ (7), ಆಂಧ್ರಪ್ರದೇಶ (3 ), ಗೋವಾದಲ್ಲಿ 2 ಸೇರಿದಂತೆ ಒಟ್ಟು 12 ಹೊಸ ಶಾಖೆಗಳನ್ನು ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.