ADVERTISEMENT

ಫೋನ್‌ ಪೇ 10 ಕೋಟಿ ಬಳಕೆದಾರರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

ಬೆಂಗಳೂರು: ಡಿಜಿಟಲ್ ಹಣ ಪಾವತಿ ಸಂಸ್ಥೆ ಫೋನ್‌ ಪೇ ಸಂಸ್ಥೆಯ ಬಳಕೆದಾರರ ಸಂಖ್ಯೆಯು 10 ಕೋಟಿ ದಾಟಿದೆ.

ಏಪ್ರಿಲ್‌ ತಿಂಗಳಲ್ಲಿ ಈ ಮೊಬೈಲ್‌ ವಾಲೆಟ್‌ನಲ್ಲಿ ಪ್ರತಿದಿನ 20  ಲಕ್ಷ ವಹಿವಾಟುಗಳ ಲೆಕ್ಕದಲ್ಲಿ 6 ಕೋಟಿ ವಹಿವಾಟುಗಳು ನಡೆದಿವೆ. 21 ತಿಂಗಳಿನಲ್ಲಿ 10 ಕೋಟಿ ಬಳಕೆದಾರರ ಗುರಿ ದಾಟಲಾಗಿದೆ.

ಈ ವರ್ಷಾಂತ್ಯದ ವೇಳೆಗೆ 50 ಲಕ್ಷ ವಹಿವಾಟು ತಲುಪುವ ಗುರಿ ಹಾಕಿಕೊಂಡಿದೆ.

ADVERTISEMENT

ಅಲ್ಪಾವಧಿಯಲ್ಲಿ ಗರಿಷ್ಠ ಸಂಖ್ಯೆಯ ಗ್ರಾಹಕರ ಮನ ಗೆಲ್ಲುವಲ್ಲಿ ಸಫಲವಾಗಿರುವುದಕ್ಕೆ ಸಂಸ್ಥೆಯ ಸಿಇಒ ಸಮೀರ್ ನಿಗಮ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.