ADVERTISEMENT

ಬಂಗಾರ ತುಸುವೇ ಅಗ್ಗ: ರೂ.75 ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಮತ್ತೆ ಮಂಗಳವಾರ ಇಳಿಕೆ ಆಗಿದೆ. ಸೋಮವಾರ ರೂ.445ರಷ್ಟು ಏರಿಕೆಯಾಗಿದ್ದ ಅಪರಂಜಿ ಚಿನ್ನ ಮಂಗಳವಾರ ರೂ.75ರಷ್ಟು ಇಳಿಕೆಯಾಯಿತು. ಬೆಳ್ಳಿಯೂ ರೂ.1030ರಷ್ಟು ಮೌಲ್ಯ ಕಳೆದುಕೊಂಡಿತು.

10 ಗ್ರಾಂ ಅಪರಂಜಿ ಚಿನ್ನ ಮಂಗಳವಾರ ರೂ.26,765ಕ್ಕೆ ಇಳಿಕೆಯಾದರೆ, ಸ್ಟ್ಯಾಂಡರ್ಡ್ ಚಿನ್ನ ರೂ.70ರಷ್ಟು ಕಡಿಮೆಯಾಗಿ ರೂ.26,630ಕ್ಕೆ ಬಂದಿತು. ಕೆ.ಜಿ. ಸಿದ್ಧ ಬೆಳ್ಳಿ ರೂ.46,180ರಿಂದ ರೂ.45,150ಕ್ಕಿಳಿಯಿತು.


ಆದರೆ, ನವದೆಹಲಿಯಲ್ಲಿ ಮಾತ್ರ ನಾಲ್ಕನೇ ದಿನವಾದ ಮಂಗಳವಾರವೂ ಬಂಗಾರದ ಏರುಗತಿ ಮುಂದುವರಿಯಿತು. ರೂ.200ರಷ್ಟು ಏರಿಕೆ ದಾಖಲಿಸಿದ 10 ಗ್ರಾಂ ಅಪರಂಜಿ ಚಿನ್ನ ರೂ.27,600ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ.27,400ಕ್ಕೂ ಬೆಲೆ ಹೆಚ್ಚಿಸಿಕೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.