ADVERTISEMENT

ಬಡ್ಡಿದರ ಕಡಿತಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ನವದೆಹಲಿಯಲ್ಲಿ ಸೋಮವಾರ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಭೆಯಲ್ಲಿ ಮಹಾನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ, ಅಧ್ಯಕ್ಷ        ಎಸ್. ಗೋಪಾಲಕೃಷ್ಣನ್ ಭಾಗವಹಿಸಿದ್ದರು 	- ಪಿಟಿಐ ಚಿತ್ರ
ನವದೆಹಲಿಯಲ್ಲಿ ಸೋಮವಾರ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಭೆಯಲ್ಲಿ ಮಹಾನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ, ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ ಭಾಗವಹಿಸಿದ್ದರು - ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಮತ್ತು ಹೂಡಿಕೆ ಆಕರ್ಷಿಸಲು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಒಟ್ಟಾರೆ ಶೇ 1ರಷ್ಟು ತಗ್ಗಿಸಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಆಗ್ರಹಿಸಿದೆ.

ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಶೇ 8ರಿಂದ ಶೇ 9ರಷ್ಟು ಪ್ರಗತಿ ದಾಖಲಿಸಬೇಕಾದರೆ ಬಡ್ಡಿದರ ಕಡಿತ ಅನಿವಾರ್ಯ. ಜತೆಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ), ನೇರ ತೆರಿಗೆ ನೀತಿ ಸಂಹಿತೆ(ಡಿಟಿಸಿ)ಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು `ಸಿಐಐ' ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

`ಆರ್‌ಬಿಐ' ಬಡ್ಡಿದರವನ್ನು ಶೇ 1ರಷ್ಟು ತಗ್ಗಿಸಿದರೆ ದೇಶದ `ಜಿಡಿಪಿ' ಶೇ 1ರಿಂದ ಶೇ 1.5ರಷ್ಟು ಚೇತರಿಕೆ ಕಾಣಲಿದೆ. ಸಗಟು ಹಣದುಬ್ಬರ ಇಳಿದಿರುವುದರಿಂದ ಇದನ್ನು ನಾವು ನಿರೀಕ್ಷಿಸಬಹುದು ಎಂದು ಅವರು ಹೇಳಿದರು.

ವಿಮೆ, ಬ್ಯಾಂಕಿಂಗ್ ಮತ್ತು ಪಿಂಚಣಿ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.