
ಪ್ರಜಾವಾಣಿ ವಾರ್ತೆಹೈದರಾಬಾದ್ (ಪಿಟಿಐ): ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಗೃಹ ಸಾಲ ಬಡ್ಡಿ ದರವನ್ನು ಶೇ 0.5ರಷ್ಟು ಇಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ಹೇಳಿದೆ. `ಗೃಹ ಮತ್ತು ಮೂಲಸೌಕರ್ಯ ಯೋಜನೆಗಳ ಮತ್ತು `ಹುಡ್ಕೊ ನಿವಾಸ್~ ಯೋಜನೆಯಡಿ ವೈಯಕ್ತಿಕ ಗೃಹ ಸಾಲಗಳ ದರವನ್ನು ಶೇ 0.5ರಷ್ಟು ಇಳಿಸಲಾಗಿದೆ~ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿರುವ ಗೃಹ ಯೋಜನೆಗಳ ಬದಲಾಗುವ ಬಡ್ಡಿದರ ಇನ್ನು ಮುಂದೆ ಶೇ 8.50 ಮತ್ತು ಶೇ 8.75 ಆಗಲಿದೆ. ಈ ಮೊದಲು ಈ ಬಡ್ಡಿ ದರವು ಶೇ 9 ಮತ್ತು ಶೇ 9.25ರಷ್ಟಿತ್ತು.
ಕಡಿಮೆ ಆದಾಯ ಹೊಂದಿರುವ ವರ್ಗಗಳ ಗೃಹ ಸಾಲಗಳ ಬಡ್ಡಿದರ ಶೇ 9.50ರ ಬದಲಾಗಿ ಇನ್ನು ಮುಂದೆ 9ರಷ್ಟು ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.