ADVERTISEMENT

ಬಿಎಂಡಬ್ಲ್ಯು–5 ಸರಣಿ ಕಾರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು–5 ಸರಣಿಯ ಏಳನೇ ತಲೆಮಾರಿನ ಐಷಾರಾಮಿ ಕಾರುಗಳನ್ನು   ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು–5 ಸರಣಿಯ ಏಳನೇ ತಲೆಮಾರಿನ ಐಷಾರಾಮಿ ಕಾರುಗಳನ್ನು ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದರು.   

ಮುಂಬೈ: ಬಿಎಂಡಬ್ಲ್ಯು–5 ಸರಣಿಯ ಏಳನೇ ತಲೆಮಾರಿನ ಐಷಾರಾಮಿ ಕಾರುಗಳನ್ನು ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಇಲ್ಲಿ  ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

‘ಈ ಕಾರುಗಳಲ್ಲಿ ಗೆಸ್ಚರ್ ಕಂಟ್ರೋಲ್, ಡಿಸ್‍ಪ್ಲೇ ಕೀ, ರಿಮೋಟ್ ಕಂಟ್ರೋಲ್ ಪಾರ್ಕಿಂಗ್, ವೈರ್‌ಲೆಸ್‌  ಚಾರ್ಜಿಂಗ್ ಹಾಗೂ ಅಡ್‍ವಾನ್ಸ್‌ಡ್‌ ಹೆಡ್ ಅಪ್ ಡಿಸ್ಪ್ಲೇ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯ ಅಧ್ಯಕ್ಷ ವಿಕ್ರಮ್‌ ಪಾವಾ ತಿಳಿಸಿದರು.

‘ಬಿಎಂಡಬ್ಲ್ಯು– 5 ಸರಣಿಯ ನಾಲ್ಕು(ಮೂರು ಡೀಸೆಲ್‌ ಕಾರುಗಳು ಹಾಗೂ ಒಂದು  ಪೆಟ್ರೋಲ್‌) ಮಾದರಿಯ ಕಾರುಗಳು ಇನ್ನು ಮುಂದೆ ದೇಶಿ ಮಾರುಕಟ್ಟೆಯಲ್ಲೂ ಲಭಿಸಲಿವೆ. ಗ್ರಾಹಕರು ಮುಂಗಡ ಕಾದಿರಿಸಬಹುದು’.

ADVERTISEMENT

‘530 ಐ ಸ್ಪೋರ್ಟ್‌ಲೈನ್‌’ ಹಾಗೂ ‘520 ಡಿ ಸ್ಪೋರ್ಟ್‌ಲೈನ್‌’ ಕಾರುಗಳಿಗೆ ತಲಾ ₹ 49.90 ಲಕ್ಷ, ‘520 ಡಿ ಲಕ್ಸುರಿಲೈನ್‌ ’ ಕಾರಿಗೆ ₹53.60 ಲಕ್ಷ ಹಾಗೂ ‘530 ಡಿ ಎಂ ಸ್ಪೋರ್ಟ್‌’ ಕಾರಿಗೆ ₹61.30 ಲಕ್ಷ ಬೆಲೆ ಇದೆ. ಜಿಎಸ್‌ಟಿ ಅನ್ವಯವೇ ಈ ಬೆಲೆ ನಿಗದಿಪಡಿಸಲಾಗಿದೆ. ಈ ಕಾರುಗಳನ್ನು ಚೆನ್ನೈ ಘಟಕದಲ್ಲಿ ತಯಾರಿಸಲಾಗಿದೆ ಎಂದು ವಿಕ್ರಮ್ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.