ADVERTISEMENT

ಬ್ಯಾಂಕಿಂಗ್‌ ಸೇವೆಗೆ ಜಿಎಸ್‌ಟಿ ಇಲ್ಲ

ಪಿಟಿಐ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಬ್ಯಾಂಕಿಂಗ್‌ ಸೇವೆಗೆ ಜಿಎಸ್‌ಟಿ ಇಲ್ಲ
ಬ್ಯಾಂಕಿಂಗ್‌ ಸೇವೆಗೆ ಜಿಎಸ್‌ಟಿ ಇಲ್ಲ   

ನವದೆಹಲಿ: ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಒದಗಿಸುವ ಉಚಿತ ಬ್ಯಾಂಕಿಂಗ್‌ ಸೇವೆಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬ್ಯಾಂಕ್‌ಗಳು ಒದಗಿಸುವ ಉಚಿತ ಸೇವೆಗಳಾದ ಚೆಕ್‌ ಬುಕ್‌ ನೀಡುವ, ಎಟಿಎಂಗಳಿಂದ ಹಣ ಪಡೆಯುವ, ಖಾತೆಯ ವಿವರ ನೀಡುವ ಉಚಿತ ಸೇವೆಗಳು ‘ಜಿಎಸ್‌ಟಿ’ ವ್ಯಾಪ್ತಿಗೆ ಬರುವುದಕ್ಕೆ ಸಂಬಂಧಿಸಿದ ಗೊಂದಲ ನಿವಾರಣೆ ಮಾಡಬೇಕು ಎಂದು ಹಣಕಾಸು ಸೇವೆಗಳ ಇಲಾಖೆಯು ರೆವಿನ್ಯೂ ಇಲಾಖೆಗೆ ಕೇಳಿಕೊಂಡಿತ್ತು.

ಬ್ಯಾಂಕ್‌ಗಳ ಉಚಿತ ಸೇವೆಗಳಿಗೆ ‘ಜಿಎಸ್‌ಟಿ’ ಅನ್ವಯಗೊಳ್ಳಲಾರದು ಎಂದು ರೆವಿನ್ಯೂ ಇಲಾಖೆಯು ಹಣಕಾಸು ಸೇವೆಗಳ ಇಲಾಖೆಗೆ ಸೂಚಿಸಲಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.

ADVERTISEMENT

ಬ್ಯಾಂಕ್‌ಗಳಿಗೆ ನೋಟಿಸ್‌: ಉಚಿತ ಸೇವೆಗಳಿಗೆ ಸಂಬಂಧಿಸಿದಂತೆ ಸೇವಾ ತೆರಿಗೆ ಪಾವತಿಸದಿರುವುದಕ್ಕೆ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿತ್ತು.

ಬ್ಯಾಂಕ್‌ಗಳು ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡುವಂತಿಲ್ಲ. ಈ ಕಾರಣಕ್ಕೆ 2012 ರಿಂದ 2017ರ ಅವಧಿಗೆ ಸೇವಾ ತೆರಿಗೆ ಪಾವತಿಸಬೇಕು ಎಂದು ಸೂಚಿಸಿತ್ತು.

ಬ್ಯಾಂಕ್‌ನ ಕೆಲ ಸೇವೆಗಳು ಒಂದು ಹಂತದವರೆಗೆ ಉಚಿತವಾಗಿರುತ್ತವೆ. ಅವು ವಾಣಿಜ್ಯ ಚಟುವಟಿಕೆಗಳಾಗಿರುವುದಿಲ್ಲ. ಹೀಗಾಗಿ ಈ ಸೇವೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಣಕಾಸು ಸೇವೆಗಳ ಇಲಾಖೆಯು ಅಭಿಪ್ರಾಯಪಟ್ಟಿತ್ತು. ಉಚಿತ ಸೇವೆಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ತರಬಾರದು ಎಂದು ಐಬಿಎ, ಬ್ಯಾಂಕ್‌ಗಳ ಆಡಳಿತ ಮಂಡಳಿ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.