ADVERTISEMENT

ಬ್ಯಾಂಕ್‌ಗಳ ಬಡ್ಡಿದರ ಹೆಚ್ಚಳ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST

ನವದೆಹಲಿ: ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು (ರೆಪೊ) ಹೆಚ್ಚಿಸಿರುವುದರಿಂದ ಬ್ಯಾಂಕ್‌ಗಳು ಸಾಲದ ಬಡ್ಡಿದರದಲ್ಲಿ ಏರಿಕೆ ಮಾಡಲಾರಂಭಿಸಿವೆ.

ಇದರಿಂದಾಗಿ ಗೃಹ, ವಾಹನ ಮತ್ತು ಉದ್ದಿಮೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತ ಹೆಚ್ಚಳಗೊಳ್ಳಲಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರವನ್ನು ಶೇ 0.10ರವರೆಗೂ ಏರಿಕೆ ಮಾಡಿದೆ.

ADVERTISEMENT

ಒಂದು ವರ್ಷದ ಎಂಸಿಎಲ್‌ಆರ್‌ ಅನ್ನು ಶೇ 8.50ಕ್ಕೆ ಹೆಚ್ಚಿಸಿದೆ. ಒಂದು ರಾತ್ರಿ ಅವಧಿಯ ಬಡ್ಡಿದರ ಶೇ 10 ರಷ್ಟು ಹೆಚ್ಚಾಗಿದ್ದು ಶೇ 7.90ಕ್ಕೆ ತಲುಪಿದೆ.

ಒಂದು ಮತ್ತು ಮೂರು ತಿಂಗಳ ಎಂಸಿಎಲ್‌ಆರ್‌ ಶೇ 0.10ರಷ್ಟು ಹೆಚ್ಚಾಗಿದ್ದು ಗ್ರಾಹಕರಿಗೆ ನೀಡಿಕೆ ದರವು ಕ್ರಮವಾಗಿ ಶೇ 8.20 ಮತ್ತು ಶೇ 8.30ರಷ್ಟಾಗಿದೆ. ಆರು ತಿಂಗಳ ಅವಧಿಗೆ ಶೇ 8.45ರಷ್ಟು ಬಡ್ಡಿದರ ನಿಗದಿ ಮಾಡಿದೆ. ಪರಿಷ್ಕೃತ ಬಡ್ಡಿದರವು ಜೂನ್‌ 10ರಿಂದ ಅನ್ವಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಓರಿಯಂಟಲ್‌ ಬ್ಯಾಂಕ್ ಆಫ್‌ ಕಾಮರ್ಸ್‌ (ಒಬಿಸಿ) ಜೂನ್‌ 11 ರಿಂದ ಅನ್ವಯಿಸುವಂತೆ ಸಾಲದ ಬಡ್ಡಿದರವನ್ನು ಶೇ 0.15ರವರೆಗೆ ಹೆಚ್ಚಿಸಿದೆ.

ಸಿಂಡಿಕೇಟ್‌ ಬ್ಯಾಂಕ್‌ ಎಂಸಿಎಲ್‌ಆರ್‌ ಶೇ 8.50 ರಿಂದ ಶೇ 8.55ಕ್ಕೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.