ADVERTISEMENT

ಬ್ಯಾಂಕ್‌ ಸಾಲ ವಸೂಲಿಗೆ ತಾಕೀತು

‘ಎನ್‌ಪಿಎ’ ಹೆಚ್ಚಳಕ್ಕೆ ಚಿದಂಬರಂ ಕಳವಳ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ತ್ರೈಮಾಸಿಕ ಸಾಧನೆ ಪರಾಮರ್ಶೆಗೆ ಸಂಬಂಧಿಸಿದಂತೆ ಬುಧವಾರ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ‘ಆರ್‌ಬಿಐ’ ಡೆಪ್ಯುಟಿ ಗವರ್ನರ್‌ ಕೆ.ಸಿ ಚಕ್ರವರ್ತಿ, ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಟಕ್ರು ಭಾಗವಹಿಸಿದ್ದರು 	– ಪಿಟಿಐ ಚಿತ್ರ
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ತ್ರೈಮಾಸಿಕ ಸಾಧನೆ ಪರಾಮರ್ಶೆಗೆ ಸಂಬಂಧಿಸಿದಂತೆ ಬುಧವಾರ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ‘ಆರ್‌ಬಿಐ’ ಡೆಪ್ಯುಟಿ ಗವರ್ನರ್‌ ಕೆ.ಸಿ ಚಕ್ರವರ್ತಿ, ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಟಕ್ರು ಭಾಗವಹಿಸಿದ್ದರು – ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂ­ಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚುತ್ತಿ ರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ರುವ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ಸಾಲ ವಸೂಲಿಗೆ, ವಿಶೇಷ ವಾಗಿ ಕಾರ್ಪೊ­ರೇಟ್‌ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊ­­ಳ್ಳಬೇಕು ಎಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ.

ಬುಧವಾರ ಇಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಧನೆ ಕುರಿತು ಪರಾ ಮರ್ಶೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ­ದರು.
ಬ್ಯಾಂಕುಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳಿಗೆ (ಎಂ ಎಸ್‌­ಎಂಇ) ನೀಡುವ ಸಾಲದ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಕೃಷಿ ಕ್ಷೇತ್ರಕ್ಕೆ ಸಾಲ ವಿತರಣೆಯಲ್ಲೂ ಅಷ್ಟು ಹೆಚ್ಚಳ ಕಂಡುಬಂದಿಲ್ಲ. ಕೇವಲ ‘ತೃಪ್ತಿ ದಾಯಕ’ ಮಟ್ಟದಲ್ಲಿದೆ ಅಷ್ಟೆ ಎಂದರು.

ಕಾರ್ಪೊರೇಟ್‌, ಸಣ್ಣ ಕೈಗಾರಿಕೆ ಮತ್ತು ರಿಯಲ್‌ ಎಸ್ಟೇಟ್‌ ವಲಯ­ದಿಂದ ದೊಡ್ಡ ಪ್ರಮಾಣದಲ್ಲಿ ಸಾಲ ವಸೂಲಿ ಆಗಬೇಕಿದೆ. ‘ಪಿಎಸ್‌ಯು’ ಬ್ಯಾಂಕುಗಳ ಮುಖ್ಯಸ್ಥರು ಈ ಕುರಿತು ಗಮನ ಹರಿಸಬೇಕು. ಸಾಲ ಬಾಕಿ ಉಳಿಸಿ­ಕೊಂಡಿರುವವರ ಪಟ್ಟಿ ತಯಾರಿಸಿ ವಸೂ ಲಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದರು.

2013ರ ಮಾರ್ಚ್‌ನಲ್ಲಿ ರೂ.1.83 ಲಕ್ಷ ಕೋಟಿಯಷ್ಟಿದ್ದ ಸರ್ಕಾರಿ  ಸ್ವಾಮ್ಯದ ಬ್ಯಾಂಕುಗಳ ‘ಎನ್‌ಪಿಎ’  ಸೆಪ್ಟೆಂಬರ್‌ ವೇಳೆಗೆ ಶೇ 28.5ರಷ್ಟು ಹೆಚ್ಚಿದ್ದು, ರೂ.2.36 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಈ ನಡುವೆ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ಬ್ಯಾಂಕುಗಳು ರೂ.18,933 ಕೋಟಿ ಸಾಲ ವಸೂಲಿ ಮಾಡಿವೆ ಎಂದು ಅವರು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.