ADVERTISEMENT

ಬ್ಯಾಂಕ್ ಪರವಾನಗಿ: ಶೀಘ್ರದಲ್ಲೇ ಸಮಿತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ):ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ಕೋರಿ ಬಂದಿರುವ ಅರ್ಜಿಗಳನ್ನು ಅಂತಿಮಗೊಳಿಸಲು `ಆರ್‌ಬಿಐ' ಶೀಘ್ರದಲ್ಲೇ ಉನ್ನತ ಮಟ್ಟದ ಸಲಹಾ ಸಮಿತಿ (ಎಚ್‌ಎಲ್‌ಎಸಿ) ರಚಿಸಲಿದೆ.

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ 5 ಜನ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ. `ಸೆಬಿ' ಅಧ್ಯಕ್ಷ ಯು.ಕೆ ಸಿನ್ಹಾ, ವಿಮೆ ನಿಯಂತ್ರಣ ಪ್ರಾಧಿಕಾರದ  ಅಧ್ಯಕ್ಷ ಟಿ.ಎಸ್. ವಿಜಯನ್,  ಪಿಂಚಣಿ ಪ್ರಾಧಿಕಾರದ ಅಧ್ಯಕ್ಷ ಯೋಗೇಶ್ ಅಗರ್‌ವಾಲ್, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಟಕ್ರು ಮತ್ತು ಹಣಕಾಸು ತಜ್ಞ ವೈ.ಎಚ್. ಮಲೇಗಾಂ ಸದಸ್ಯರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.