ADVERTISEMENT

ಭಾರತದಲ್ಲಿ ಟ್ಯಾಬ್ಲೆಟ್ ಮಾರಾಟ ಶೇಕಡ 16ರಷ್ಟು ಇಳಿಕೆ

ಏಜೆನ್ಸೀಸ್
Published 12 ಜೂನ್ 2017, 14:01 IST
Last Updated 12 ಜೂನ್ 2017, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲಿ ಟ್ಯಾಬ್ಲೆಟ್‌ಗಳ ಮಾರಾಟ ಪ್ರಮಾಣ ಶೇಕಡ 16ರಷ್ಟು ಇಳಿಕೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ಸಿಎಮ್‌ಆರ್ ವರದಿ ತಿಳಿಸಿದೆ.

ಕಳೆದ ವರ್ಷದ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕ ಅವಧಿ ಜತೆ ಹೋಲಿಸಿದರೂ ಟ್ಯಾಬ್ಲೆಟ್‌ಗಳ ಮಾರಾಟ ಪ್ರಮಾಣದಲ್ಲಿ ಶೇಕಡ 6ರಷ್ಟು ಇಳಿಕೆಯಾಗಿದೆ. ಟ್ಯಾಬ್ಲೆಟ್‌ ಮಾರಾಟ ಇಳಿಕೆಯಿಂದ ಸುಮಾರು 7.6 ಲಕ್ಷ ಘಟಕಗಳ ವಹಿವಾಟು ಕುಸಿದಿದೆ.

ಪ್ರಸ್ತುತ ಡಾಟಾವೈಂಡ್ ಶೇಕಡ 34ರಷ್ಟು ಮಾರುಕಟ್ಟೆ ಹಂಚಿಕೆ ಹೊಂದಿದ್ದರೆ, ಐಬಾಲ್ ಶೇಕಡ 16ರಷ್ಟು ಮಾರುಕಟ್ಟೆ ಹಂಚಿಕೆ ಹೊಂದಿದೆ. ಸ್ಯಾಮ್ಸಂಗ್ ಶೇಕಡ 15, ಮೈಕ್ರೋಮ್ಯಾಕ್ಸ್ ಶೇಕಡ 8ರ ಮಾರುಕಟ್ಟೆ ಹಂಚಿಕೆ ಹೊಂದಿವೆ. ಈ ವರ್ಷದ ಅಂತ್ಯದ ವೇಳೆಗೆ 4ಜಿ ಟ್ಯಾಬ್ಲೆಟ್‌ಗಳ ಮಾರಾಟ ಪ್ರಮಾಣ ಶೇಕಡ 50ರಷ್ಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.