ADVERTISEMENT

‘ಭಾರತ್‌–22’ ಇಟಿಎಫ್‌ ಎರಡನೇ ಕಂತು

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ನವದೆಹಲಿ: ಕೇಂದ್ರ ಸರ್ಕಾರ ‘ಭಾರತ್‌ 22’ ಇಟಿಎಫ್‌ನ ಎರಡನೇ ಕಂತು ಆರಂಭಿಸುವ ಸಿದ್ಧತೆಯಲ್ಲಿದೆ.

ಇಟಿಎಫ್‌ ನಿರ್ವಹಣೆ ಮಾಡುವ ಐಸಿಐಸಿಐ ಮ್ಯೂಚುವಲ್ ಫಂಡ್‌ ಎರಡನೇ ಕಂತಿಗೆ ಕರಡು ಪತ್ರಗಳನ್ನು ಸಲ್ಲಿಸಿದೆ. ಹೀಗಾಗಿ ಸರ್ಕಾರ ಎರಡನೇ ಕಂತು ಆರಂಭಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಮೊದಲ ಕಂತಿನಲ್ಲಿ ಉತ್ತಮ ಉತ್ತಮ ಸ್ಪಂದನೆ ದೊರೆತು ₹ 14,500 ಕೋಟಿ ಸಂಗ್ರಹವಾಗಿತ್ತು.

ADVERTISEMENT

ಒಟ್ಟು ಆರು ವಲಯಗಳು ಅಂದರೆ, ವಿದ್ಯುತ್‌, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತುಗಳು (ಎಫ್‌ಎಂಸಿಜಿ), ಹಣಕಾಸು, ಕೈಗಾರಿಕೆ, ಮೂಲ ಸಾಮಗ್ರಿಗಳು (ಗಣಿಗಾರಿಕೆ, ರಾಸಾಯನಿಕ ಉತ್ಪನ್ನಗಳು ಇತ್ಯಾದಿ), ಅಗತ್ಯ ವಸ್ತುಗಳ ವಲಯಗಳು ಇದರಲ್ಲಿವೆ.

ಮುಖ್ಯವಾಗಿ ಒಎನ್‌ಜಿಸಿ, ಐಒಸಿ, ಎಸ್‌ಬಿಐ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌, ಬಿಪಿಸಿಎಲ್‌, ಎನ್‌ಟಿಪಿಸಿ, ಗೇಲ್‌,ಎನ್‌ಸಿಎಲ್‌... ಹೀಗೆ ಒಟ್ಟು 22 ಷೇರುಗಳು ಈ ಇಟಿಎಫ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.