ADVERTISEMENT

ಮಾಧ್ಯಮ ಮಾರುಕಟ್ಟೆ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಚೆನ್ನೈ(ಪಿಟಿಐ): ದಕ್ಷಿಣ ಭಾರತದ ಮಾಧ್ಯಮ ಮತ್ತು ಮನರಂಜನೆ ಲೋಕದ ಉದ್ಯಮ 2016ರ ವೇಳೆಗೆ ರೂ.36 ಸಾವಿರ ಕೋಟಿ ವಹಿವಾಟು ಪ್ರಮಾಣಕ್ಕೆ ಬೆಳವಣಿಗೆ ಕಾಣಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ(ಫಿಕ್ಕಿ) ನಡೆಸಿದ ಸಮೀಕ್ಷೆ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದಕ್ಷಿಣ ಭಾರತ ಮಾಧ್ಯಮ ಮತ್ತು ಮನರಂಜನೆ ಉದ್ಯಮ ರೂ.21,190 ಕೋಟಿ ವಹಿವಾಟು ನಡೆಸುವ ನಿರೀಕ್ಷೆ ಇದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸರಾಸರಿ ಶೇ 14ರಷ್ಟು ವಾರ್ಷಿಕ ಪ್ರಗತಿ ದಾಖಲಿಸಲಿದೆ ಎಂದಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮುದ್ರಣ, ವಿದ್ಯುನ್ಮಾನ, ಚಲನಚಿತ್ರ, ರೇಡಿಯೊ ಒಳಗೊಂಡ ಮಾಧ್ಯಮ ಮಾರುಕಟ್ಟೆ ತಮಿಳುನಾಡಿನಲ್ಲಿ ರೂ.7,620 ಕೋಟಿ, ಆಂಧ್ರಪ್ರದೇಶದಲ್ಲಿ  ರೂ.6,480 ಕೋಟಿ ಕರ್ನಾಟಕದಲ್ಲಿ ರೂ.3,985 ಕೋಟಿ ಮತ್ತು ಕೇರಳದಲ್ಲಿ ರೂ.3,105 ಕೋಟಿ ವಹಿವಾಟು ನಡೆಸಲಿದೆ. ದೇಶದ ಒಟ್ಟು ಮಾಧ್ಯಮ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತದ ಪಾಲೇ ಶೇ 58ರಷ್ಟು ದೊಡ್ಡದಿದೆ ಎಂದೂ ಈ ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.