25 ಪೈಸೆ ನಾಣ್ಯ ವಿನಿಯಮ ಇಲ್ಲ
25 ಪೈಸೆ ಹಾಗೂ ಅದಕ್ಕಿಂತ ಕಡಿಮೆ ಮೌಲ್ಯದ ನಾಣ್ಯಗಳನ್ನು ಜುಲೈ 1 ರ ಬಳಿಕ ವಿನಿಮಯಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಜೂನ್ 30 ರಿಂದ ಅನ್ವಯವಾಗುವಂತೆ ಇಂಥ ನಾಣ್ಯಗಳ ಚಲಾವಣೆಯನ್ನು ವಾಪಸ್ ಪಡೆಯಬೇಕೆನ್ನುವ ಸರ್ಕಾರದ ಪ್ರಕಟಣೆಯ ಬೆನ್ನಲ್ಲಿಯೇ ‘ಆರ್‌ಬಿಐ’ ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ವಿಶ್ವಾಸಾರ್ಹತೆಯ ಪಟ್ಟಿ:ಎಚ್‌ಡಿಎಫ್‌ಸಿ
ಈ ವರ್ಷದ ‘ವಿಶ್ವದ ಅತ್ಯಂತ ವಿಶ್ವಾಸಾರ್ಹತೆಯ ಕಂಪೆನಿಗಳ’ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಭಾರತದ ಏಕೈಕ ಕಂಪೆನಿಯೆಂದರೆ ಎಚ್‌ಡಿಎಫ್‌ಸಿಯಂತೆ! ಹಾಗಂತ ಅಮೆರಿಕ ಮೂಲದ ಚಿಂತಕರ ಚಾವಡಿ ಎಥಿಸ್ಪೇರ್ ಇನ್ಸ್‌ಟಿಟ್ಯೂಟ್ ಹೇಳಿದೆ. ವಿಶ್ವದ 110 ವಿಶ್ವಾಸಾರ್ಹ ಕಂಪೆನಿಗಳಲ್ಲಿ ಎಚ್‌ಡಿಎಫ್‌ಸಿ ಕೂಡ ಒಂದು ಎಂದೂ ಸಂಸ್ಥೆ ಹೇಳಿದೆ. ಇವುಗಳಲ್ಲಿ 36 ಕಂಪೆನಿಗಳು ಹೊಸದಾಗಿ ಸೇರ್ಪಡೆಯಾದರೆ, ಕಳೆದ ವರ್ಷ ಸೇರ್ಪಡೆಯಾದ 26 ಕಂಪೆನಿಗಳ ಹೆಸರನ್ನು ಕೈಬಿಡಲಾಗಿದೆ. ‘ ಈ ಸಾಧನೆಗೆ ಹೆಮ್ಮೆ ಎನಿಸುತ್ತದೆ’ ಎಂದು ಎಚ್‌ಡಿಎಫ್‌ಸಿ ಉಪಾಧ್ಯಕ್ಷ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆಕಿ ಮಿಸ್ತ್ರಿ ಹೇಳುತ್ತಾರೆ. l
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.