ADVERTISEMENT

ಮುತ್ತೂಟ್ ಎಸ್ಟೇಟ್: ಠೇವಣಿ ನಿಷೇಧ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ಮುತ್ತೂಟ್ ಫಿನ್‌ಕಾರ್ಫ್ ಲಿಮಿಟೆಡ್‌ನ ಅಂಗ ಸಂಸ್ಥೆ ಮುತ್ತೂಟ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್, ಸಾರ್ವಜನಿಕರಿಂದ ಯಾವುದೇ ಸ್ವರೂಪದಲ್ಲಿ ಠೇವಣಿ ಸಂಗ್ರಹಿಸಬಾರದು ಎಂದು ಭಾರತೀಯ  ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುತ್ತೂಟ್ ಫಿನ್‌ಕಾರ್ಪ್ ಕೇರಳ ಮೂಲದ ಬ್ಯಾಂಕೇತರ ಹಣಕಾಸು (ಎನ್‌ಬಿಎಫ್‌ಸಿ) ಸಂಸ್ಥೆಯಾಗಿದ್ದು,  ಮುತ್ತೂಟ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್‌ನ ಪ್ರವರ್ತಕ ಸಂಸ್ಥೆಯೂ ಆಗಿದೆ. ಈ ಸಂಸ್ಥೆಯು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಠೇವಣಿ ಸಂಗ್ರಹಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದೂ `ಆರ್‌ಬಿಐ~ ಪ್ರಕಟಣೆ ತಿಳಿಸಿದೆ. ಈ ಕುರಿತು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT