ADVERTISEMENT

ಮೂಲಸೌಕರ್ಯ: ಉತ್ತಮ ಪ್ರಗತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ನವದೆಹಲಿ (ಪಿಟಿಐ): ಆರ್ಥಿಕ ಹಿಂಜರಿತದ ಪರಿಣಾಮದ ಮಧ್ಯೆಯೂ 2010ನೇ ಸಾಲಿನಲ್ಲಿ ದೇಶದ ಮೂಲಸೌಕರ್ಯ ಕ್ಷೇತ್ರ ಉತ್ತಮ ಪ್ರಗತಿ ದಾಖಲಿಸಿದೆ ಎಂದು ಸರ್ಕಾರದ ವರದಿ ತಿಳಿಸಿದೆ. ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳಾದ ಇಂಧನ, ಕಲ್ಲಿದ್ದಲು, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 11 ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ನಿರ್ದಶನಾಲಯ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಮೂಲಸೌಕರ್ಯ ರಂಗ ಶೇಕಡ 8.9ರಷ್ಟು ವೃದ್ಧಿ ಕಂಡಿದೆ.

ಕಲ್ಲಿದ್ದಲು ಉತ್ಪಾದನೆ ಶೇ 10.5ರಷ್ಟು ಹೆಚ್ಚಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ  ಚೇತರಿಕೆ ಕಂಡುಬಂದಿದ್ದು, ಶೇ 6.3ರಷ್ಟು ಪ್ರಗತಿ ದಾಖಲಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಿದ್ದು, ಶೇ 2.7 ಮತ್ತು ಶೇ 8.7ರಷ್ಟು ಏರಿಕೆ ಕಂಡಿದೆ. ಸರಕು ಸಾಗಾಣಿಕೆ ವಿಮಾನಯಾನ ಕ್ಷೇತ್ರವೂ ವೃದ್ಧಿ ಕಂಡಿದ್ದು, ಆಮದು ಪ್ರಮಾಣ ಶೇ 5.2ರಷ್ಟು ಮತ್ತು ರಫ್ತು ಶೇ 6.9ರಷ್ಟು ಕುಸಿದಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.