ADVERTISEMENT

ಮೊಬೈಲ್‌–ಆಧಾರ್‌ ಜೋಡಣೆ: ಫೆ.6 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST
ಮೊಬೈಲ್‌–ಆಧಾರ್‌ ಜೋಡಣೆ: ಫೆ.6 ಕೊನೆಯ ದಿನ
ಮೊಬೈಲ್‌–ಆಧಾರ್‌ ಜೋಡಣೆ: ಫೆ.6 ಕೊನೆಯ ದಿನ   

ನವದೆಹಲಿ: ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲು 2018ರ ಫೆಬ್ರುವರಿ 6 ಕಡೆಯ ದಿನ ಎಂದು ಗ್ರಾಹಕರೊಂದಿಗೆ ನಡೆಸುವ ಸಂವಹನದಲ್ಲಿ (ಎಸ್‌ಎಂಎಸ್‌, ಇಂಟರಾಕ್ಟಿವ್‌ ವಾಯ್ಸ್‌ ಕಾಲ್‌) ಉಲ್ಲೇಖಿಸುವಂತೆ ಎಲ್ಲ ದೂರ ಸಂಪರ್ಕ ಸೇವಾ ಕಂಪೆನಿಗಳಿಗೆ ಕೇಂದ್ರ ದೂರ ಸಂಪರ್ಕ ಸಚಿವಾಲಯ ಸೋಮವಾರ ಸೂಚಿಸಿದೆ.

ಬ್ಯಾಂಕ್‌ ಖಾತೆಗಳು ಅಥವಾ ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಜೋಡಣೆ ಮಾಡುವ ಕೊನೆಯ ದಿನ ಯಾವುದು ಎಂಬ ಮಾಹಿತಿಯನ್ನು ಗ್ರಾಹಕರಿಗೆ ನೀಡುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ  ಸಚಿವಾಲಯಕ್ಕೆ ನಿರ್ದೇಶಿಸಿತ್ತು. ಇದರ ಆಧಾರದಲ್ಲಿ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT