ADVERTISEMENT

ಯೂರೋಪ್ ಬಿಕ್ಕಟ್ಟು: ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಬ್ರಸೆಲ್ಸ್ (ಐಎಎನ್‌ಎಸ್): ಆರ್ಥಿಕ ಬಿಕ್ಕಟ್ಟು ಶಮನಕ್ಕೆ, 1 ಲಕ್ಷ ಕೋಟಿ  ಯೂರೊಗಳಷ್ಟು ಸಾಲದ ನೆರವು ಪಡೆಯಲು ಯೂರೋಪ್ ನಾಯಕರು ಗುರುವಾರ ಇಲ್ಲಿ ನಡೆದ ತುರ್ತು ಶೃಂಗಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.

ಸಾಲದ ಬಿಕ್ಕಟ್ಟು ಬಗೆಹರಿಸಲು, ಯೂರೋಪ್ ನಾಯಕರು ವಿಶ್ವಾಸಾರ್ಹ ಮತ್ತು ಮಹತ್ವಾಂಕಾಂಕ್ಷೆ ಸ್ಪಂದನೆ ತೋರಿದ್ದಾರೆ ಎಂದು ಫಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. 

ತುರ್ತು ಸಭೆಯ ಒಪ್ಪಂದದಂತೆ ಖಾಸಗಿ ಸಾಲಗಾರರಿಂದ 50 ಶತಕೋಟಿ ಯೂರೋ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 100 ಶತಕೋಟಿ ಯೂರೋ ನೆರವು ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.