ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ, ಫೆಬ್ರುವರಿ ತಿಂಗಳಲ್ಲಿ ದೇಶದ ಒಟ್ಟು ರಫ್ತು ವಹಿವಾಟು ಶೇ 4.3ರಷ್ಟು ಹೆಚ್ಚಿದ್ದು, ರೂ 12 ಲಕ್ಷ ಕೋಟಿಗಳಷ್ಟಾಗಿದೆ. ಇದೇ ಅವಧಿಯಲ್ಲಿ ಆಮದು ಶೇ 20ರಷ್ಟು ಪ್ರಗತಿ ಕಂಡಿದ್ದು, ರೂ 19 ಲಕ್ಷ ಕೋಟಿಗೆ ಏರಿಕೆ ಕಂಡಿದೆ.
ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನಿಂದ ಕಳೆದ ಮೂರು ತಿಂಗಳಿಂದ ರಫ್ತು ವಹಿವಾಟು ಮಂದಗತಿಯ ಪ್ರಗತಿ ಕಾಣುತ್ತಿದೆ. ಕಚ್ಚಾ ತೈಲ, ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಿರುವುದರಿಂದ ಆಮದು ಮೊತ್ತ ಗಣನೀಯ ಏರಿಕೆ ಕಂಡಿದೆ. ಕಳೆದ 11 ತಿಂಗಳ ಅವಧಿಯಲ್ಲಿ ತೈಲ ಆಮದು ಶೇ 41ರಷ್ಟು ಹೆಚ್ಚಿದ್ದು, ರೂ 66 ಲಕ್ಷ ಕೋಟಿಗಳಷ್ಟಾಗಿದೆ. ತೈಲದ ಜತೆಗೆ ಕಲ್ಲಿದ್ದಲು ಮತ್ತು ರಸಗೊಬ್ಬರ ಆಮದು ದರದ ಹೆಚ್ಚಳ ದೇಶದ ವಿತ್ತೀಯ ಕೊರತೆ ಅಂತರ ಹೆಚ್ಚುವಂತೆ ಮಾಡಿದೆ. ಫೆಬ್ರುವರಿ ತಿಂಗಳಲ್ಲಿ ದೇಶದ ವಿತ್ತೀಯ ಕೊರತೆಯು ರೂ 7 ಲಕ್ಷ ಕೋಟಿಗಳಷ್ಟಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.