ADVERTISEMENT

ರಫ್ತು ವಹಿವಾಟು ಚೇತರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಸಾಲದ ಬಿಕ್ಕಟ್ಟಿನ ಪ್ರತಿಕೂಲ ವಾತಾವರಣದಿಂದ  ದೇಶದ ರಫ್ತು ವಹಿವಾಟು ಕಳೆದ ಡಿಸೆಂಬರ್ ತಿಂಗಳಲ್ಲಿ ಶೇ 6ರಷ್ಟು ಮಾತ್ರ ಪ್ರಗತಿ ದಾಖಲಿಸಿದೆ. ಆದರೆ, ಇದೇ ಅವಧಿಯಲ್ಲಿ ಆಮದು ವಹಿವಾಟು ಮೂರು ಪಟ್ಟು ಹೆಚ್ಚಳಗೊಂಡಿದೆ.

ಡಿಸೆಂಬರ್‌ನಲ್ಲಿ 25 ಶತಕೋಟಿ ಡಾಲರ್(್ಙ1.25 ಲಕ್ಷ ಕೋಟಿ) ರಫ್ತು ಮತ್ತು 37 ಶತಕೋಟಿ ಡಾಲರ್ (್ಙ1.85 ಲಕ್ಷ ಕೋಟಿ) ಆಮದು ವಹಿವಾಟು ದಾಖಲಾಗಿದೆ.  ವ್ಯಾಪಾರ ಕೊರತೆಯು 12 ಶತಕೋಟಿ (್ಙ60 ಲಕ್ಷ ಕೋಟಿ)ಡಾಲರ್‌ಗಳಷ್ಟಾಗಿದೆ.

ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಒಟ್ಟಾರೆ ರಫ್ತು ಶೇ 25ರಷ್ಟು ಹೆಚ್ಚಳ ಕಂಡಿದ್ದು 217 ಶತಕೋಟಿ ಡಾಲರ್ (್ಙ10.8ಲಕ್ಷ ಕೋಟಿ)ಗಳಷ್ಟಾಗಿದೆ. ಈ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ವಹಿವಾಟು ಶೇ 30ರಷ್ಟು ಏರಿಕೆ ಕಂಡಿದೆ. ವಿತ್ತೀಯ ಕೊರತೆಯು 133 ಶತಕೋಟಿ ಡಾಲರ್‌ಗಳಷ್ಟಾಗಿದೆ (್ಙ6.65ಲಕ್ಷ ಕೋಟಿ) ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ವರ್ಷಾಂತ್ಯಕ್ಕೆ ಅಂದಾಜಿಸಲಾಗಿರುವ 300 ಶತಕೋಟಿ ಡಾಲರ್ (್ಙ15 ಲಕ್ಷ ಕೋಟಿ) ರಫ್ತು ವಹಿವಾಟು ಗುರಿ ತಲುಪುವುದು ಕಷ್ಟವಾಗಬಹುದು. ಕಳೆದ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ ರಫ್ತು ಪ್ರಗತಿ ಶೇ 20ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಿಂದ ಹೆಚ್ಚಿನ ಸರಕುಗಳು ಯೂರೋಪ್ ಮಾರುಕಟ್ಟೆಗೆ  ರಫ್ತಾಗುತ್ತಿದ್ದು, ಆರ್ಥಿಕ ಬಿಕ್ಕಟ್ಟಿನಿಂದ  ವಹಿವಾಟಿಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಂ ರಫೀಕ್ ಅಹಮ್ಮದ್ ಹೇಳಿದಾರೆ.  ಪ್ರಸಕ್ತ ಅವಧಿಯಲ್ಲಿ ರಫ್ತು 280 ಶತಕೋಟಿ ಡಾಲರ್‌ಗಳಿಗೆ (್ಙ14 ಲಕ್ಷ ಕೋಟಿ) ಇಳಿಯಬಹುದು ಎಂದು ಅವರು ಅಂದಾಜಿಸಿದ್ದಾರೆ.

ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಆಮದು ವಹಿವಾಟು ಶೇ 30ರಷ್ಟು ಚೇತರಿಸಿಕೊಂಡಿದ್ದು, 350 ಶತಕೋಟಿ (್ಙ175 ಲಕ್ಷ ಕೋಟಿ) ಡಾಲರ್‌ಗಳಷ್ಟಾಗಿದೆ. ತೈಲದ ಆಮದು ಈ ಮೂರು ತ್ರೈಮಾಸಿಕ ಅವಧಿಗಳಲ್ಲಿ ಶೇ 11ರಷ್ಟು ಹೆಚ್ಚಿದ್ದು 10 ಶತಕೋಟಿ (್ಙ50 ಸಾವಿರ ಕೋಟಿ ) ಡಾಲರ್‌ಗಳಿಗೆ ಏರಿದೆ.
 
ಸದ್ಯದ ಪರಿಸ್ಥಿತಿಯಲ್ಲಿ ರಫ್ತು ಮತ್ತು ಆಮದು ನಡುವಿನ ವ್ಯಾಪಾರ ಕೊರತೆಯು ದೇಶದ ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 10ರಷ್ಟನ್ನು ದಾಟಲಿದೆ ಎಂದೂ  `ಫಿಕ್ಕಿ~ ಅಂದಾಜಿಸಿದೆ.

ಗುರಿ ಈಡೇರಿಕೆ ಅಸಾಧ್ಯ?

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ 300 ಶತಕೋಟಿ ಡಾಲರ್‌ಗಳಷ್ಟು (್ಙ15,00,000 ಕೋಟಿ) ರಫ್ತು ವಹಿವಾಟು ನಡೆಸಬೇಕೆನ್ನುವ ಗುರಿ ತಲುಪುವುದು ಕಷ್ಟ ಸಾಧ್ಯ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟವು (ಎಫ್‌ಐಇಒ) ಅಭಿಪ್ರಾಯಪಟ್ಟಿದೆ.

ಸಾಲದ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಮಾರುಕಟ್ಟೆಯ ಅನಿಶ್ಚಿತತೆಗಳಿಂದ ರಫ್ತು ವಹಿವಾಟುದಾರರು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದಾರೆ.  ದೇಶಿ ರಫ್ತುದಾರರಿಗೆ ಈಗ ಸಂಕಷ್ಟದ ದಿನಗಳು ಎದುರಾಗಿವೆ ಎಂದು `ಎಫ್‌ಐಇಒ~ ಅಧ್ಯಕ್ಷ ರಫೀಕ್ ಅಹ್ಮದ್ ತಿಳಿಸಿದ್ದಾರೆ.

ಐರೋಪ್ಯ ಒಕ್ಕೂಟದಲ್ಲಿನ ಬಿಕ್ಕಟ್ಟು, ದೇಶಿ ರಫ್ತುದಾರರೂ ಸೇರಿದಂತೆ ಜಾಗತಿಕ ವ್ಯಾಪಾರ ವಹಿವಾಟಿಗೆ ದೊಡ್ಡ ಸವಾಲು ಒಡ್ಡಿದೆ. ಪ್ರತಿಕೂಲ ಪರಿಸ್ಥಿತಿ ಹೊರತಾಗಿಯೂ ಏಪ್ರಿಲ್ - ಡಿಸೆಂಬರ್ ತಿಂಗಳ ಅವಧಿಯಲ್ಲಿ ದೇಶಿ ರಫ್ತು ವಹಿವಾಟು ಶೇ 26ರಷ್ಟು ಏರಿಕೆ ದಾಖಲಿಸಿದೆ. ಆದರೂ, ಈ ಹಣಕಾಸು ವರ್ಷಕ್ಕೆ ನಿಗದಿ ಮಾಡಲಾಗಿರುವ ್ಙ 15 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.