ADVERTISEMENT

ರಸ್ತೆ ಮಾರ್ಗ: ಪಾಕ್‌ಗೆ ರೂ. 1376 ಕೋಟಿ ಮೌಲ್ಯದ ಸರಕು ರಫ್ತು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಚಂಡೀಗಢ(ಪಿಟಿಐ): ಭಾರತ-ಪಾಕಿಸ್ತಾನ ನಡುವಿನ ರಸ್ತೆ ಮಾರ್ಗದ ವಾಣಿಜ್ಯ ಚಟುವಟಿಕೆ 2011-12ರಲ್ಲಿ ಶೇ. 44ರಷ್ಟು ಹೆಚ್ಚಿದ್ದು, ಒಟ್ಟು 2341 ಕೋಟಿ ರೂಪಾಯಿ ವಹಿವಾಟು ನಡೆದಿದೆ.

2010-11ರಲ್ಲಿ ಪಾಕ್‌ಗೆ 1170 ಕೋಟಿ ರೂಪಾಯಿಯಷ್ಟಿದ್ದ ಭಾರತದ ರಫ್ತು, ಕಳೆದ ಸಾಲಿನಲ್ಲಿ 1376 ಕೋಟಿ ಗೆ ಹೆಚ್ಚಿದೆ. ಪಾಕ್‌ನಿಂದ 865 ಕೋಟಿ ಮೊತ್ತದ (ಶೇ. 100 ಹೆಚ್ಚಳ) ಸರಕುಗಳನ್ನು ಭಾರತ ತರಿಸಿಕೊಂಡಿದೆ.

ಅಟ್ಟಾರಿ-ವಾಘಾ ಗಡಿಯ ರಸ್ತೆ ಮಾರ್ಗ ನಡೆಸಿದ ವ್ಯಾಪಾರದಲ್ಲಿ ಕಳೆದ ವರ್ಷವೂ ಭಾರತದ ವಹಿವಾಟೇ ಹೆಚ್ಚು ಇದೆ. ಭಾರತದಿಂದ 2010-11ರಲ್ಲಿ 32 ಸಾವಿರ ಸರಕು ಸಾಗಣೆ ಲಾರಿಗಳು ಪಾಕ್‌ಗೆ ಸಂಚರಿಸಿದ್ದರೆ, ಮರು ವರ್ಷ ಅದು 39 ಸಾವಿರಕ್ಕೆ ಹೆಚ್ಚಿದೆ. ಪಾಕ್‌ನಿಂದಲೂ 17 ಸಾವಿರ ಟ್ರಕ್‌ಗಳು(ಹಿಂದಿನ ವರ್ಷ 3600 ಟ್ರಕ್) ಸರಕು ಹೊತ್ತು ಬಂದಿವೆ.

ADVERTISEMENT

ಪಾಕ್‌ಗೆ ಭಾರತದಿಂದ ರಫ್ತಾಗುವ ವಸ್ತುಗಳಲ್ಲಿ ಸೋಯಾಬೀನ್‌ನಿಂದ ತೆಗೆದ ಎಣ್ಣೆ ಮತ್ತಿತರ ಖಾದ್ಯ ಪದಾರ್ಥಗಳ ಪಾಲೇ ಶೇ. 70ರಷ್ಟಿದೆ. ಇದರಲ್ಲಿ ಮಧ್ಯಪ್ರದೇಶದ ಸರಕೇ ಹೆಚ್ಚಾಗಿದೆ. ನಾಸಿಕ್, ದೆಹಲಿ, ಕಾನ್ಪುರ, ರಾಜಸ್ತಾನದಿಂದ ಹೆಚ್ಚು ತಾಜಾ ತರಕಾರಿ ರಫ್ತಾಗುತ್ತಿದೆ ಎಂದು ಸೀಮಾಸುಂಕ ಕಚೇರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.